-->

500, 2000 ರೂ. ನೋಟುಗಳಲ್ಲಿನ ಗಾಂಧಿ ಫೋಟೋ ತೆಗೆಯಲು‌ ಮೋದಿಯವರಿಗೆ ರಾಜಸ್ಥಾನ ಕಾಂಗ್ರೆಸ್ ಶಾಸಕ ಪತ್ರ ಮುಖೇನ ಮನವಿ

500, 2000 ರೂ. ನೋಟುಗಳಲ್ಲಿನ ಗಾಂಧಿ ಫೋಟೋ ತೆಗೆಯಲು‌ ಮೋದಿಯವರಿಗೆ ರಾಜಸ್ಥಾನ ಕಾಂಗ್ರೆಸ್ ಶಾಸಕ ಪತ್ರ ಮುಖೇನ ಮನವಿ

ಭೋಪಾಲ್​: 500 ಹಾಗೂ 2000 ರೂ. ನೋಟುಗಳ ಮೇಲಿರುವ ಮೇಲಿರುವ ಮಹಾತ್ಮ ಗಾಂಧಿಯ ಫೋಟೋವನ್ನು ತೆಗೆಯುವಂತೆ ರಾಜಸ್ಥಾನದ ಕಾಂಗ್ರೆಸ್ ಶಾಸಕ ಭರತ್​ ಸಿಂಗ್​ ಕುಂದನ್​ಪುರ್​​ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದಾರೆ. 

ಇದಕ್ಕೆ ಕಾರಣವನ್ನೂ ಹೇಳಿರುವ ಅವರು, 500 ಮತ್ತು 2000 ರೂ. ನೋಟುಗಳನ್ನು ಹೆಚ್ಚಾಗಿ ಭ್ರಷ್ಟಾಚಾರಕ್ಕೆ ಬಳಸಲಾಗುತ್ತಿದೆ. ಇದು ಗಾಂಧಿಯವರ ತತ್ವಕ್ಕೆ ವಿರುದ್ಧವಾಗಿದ್ದು, ನೋಟಿನಲ್ಲಿರುವ ಗಾಂಧೀ ಫೋಟೋಗೆ ಮಾಡುವ ಅವಮಾನವಾಗಿದೆ ಎಂದಿದ್ದಾರೆ. 

ಅಕ್ಟೋಬರ್​ 2ರ 152ನೇ ಗಾಂಧಿ ಜಯಂತಿಯಂದು ಶಾಸಕ ಭರತ್​ ಸಿಂಗ್​ ಕುಂದನ್​ಪುರ್ ಅವರು ಪ್ರಧಾನಿ ಮೋದಿವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಕೇವಲ 500 ಮತ್ತು 2000 ರೂ. ನೋಟುಗಳಲ್ಲಿನ ಗಾಂಧಿ ಫೋಟೋ ತೆಗೆಯಲು ಹೇಳಿರುವ ಅವರು 5, 10, 20, 50, 100 ಮತ್ತು 200 ರೂ. ನೋಟುಗಳಲ್ಲಿನ ಗಾಂಧಿ ಫೋಟೋಗಳು ಇರಲಿ. ಏಕೆಂದರೆ, ಈ ನೋಟುಗಳನ್ನು ಹೆಚ್ಚಾಗಿ ಬಡ ಜನರು ಉಪಯೋಗಿಸುತ್ತಾರೆ ಎಂದಿದ್ದಾರೆ.

ಅಲ್ಲದೆ, ರಾಜಸ್ಥಾನದಲ್ಲಿ ಭ್ರಷ್ಟಾಚಾರ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದೆ ಎಂದಿರುವ ಶಾಸಕ ಭರತ್ ಸಿಂಗ್, ಜನವರಿ 2019 ರಿಂದ 2020ರ ಡಿಸೆಂಬರ್​ 31ರವರೆಗೆ 616 ಪ್ರಕರಣಗಳು ದಾಖಲಾಗಿವೆ. ಇದರ ಪ್ರಕಾರ ದಿನವೊಂದಕ್ಕೆ ಸರಾಸರಿ 2 ಪ್ರಕರಣಗಳಾದರೂ ದಾಖಲಾಗುತ್ತಿವೆ ಎಂಬ ಮಾಹಿತಿ ನೀಡಿದ್ದಾರೆ.

ಗಾಂಧಿಯವರು ತಮ್ಮ ಜೀವನವಿಡೀ ಬಡವರಿಗಾಗಿಯೇ ಕೆಲಸ ಮಾಡಿದ್ದಾರೆ. ಆದ್ದರಿಂದ 500 ಮತ್ತು 2000 ರೂ. ನೋಟಿನಲ್ಲಿ ಗಾಂಧಿಯ ಫೋಟೋವನ್ನು ತೆಗೆದು ಕೇವಲ ಅವರ ಕನ್ನಡಕ ಮತ್ತು ಅಶೋಕ ಚಕ್ರವನ್ನು ಬಳಕೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಸದ್ಯ ಭ್ರಷ್ಟಾಚಾರ ದೇಶವಿಡೀ ತಾಂಡವವಾಡುತ್ತಿದ್ದು, 500 ಮತ್ತು 2000 ರೂ. ನೋಟನ್ನು ಲಂಚ ನೀಡಲು ಮತ್ತು ಲಂಚ ಪಡೆಯಲು ಬಯಸುತ್ತಾರೆ. ಅಲ್ಲದೆ, ಬಾರ್​ಗಳಲ್ಲಿಯು ಗಾಂಧಿ ನೋಟುಗಳು ಹರಿದಾಡುವುದರಿಂದ ಅದು ಗಾಂಧಿಗೆ ಮಾಡಿದ ಅಪಮಾನ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article