-->

Jignesh, Kanniah join Cong? -  ಜಿಗ್ನೇಶ್, ಕನ್ನಯ್ಯ ಕಾಂಗ್ರೆಸ್ ಸೇರ್ಪಡೆ: ಕೈಗೆ ಯುವ ನಾಯಕರ ಬಲ?

Jignesh, Kanniah join Cong? - ಜಿಗ್ನೇಶ್, ಕನ್ನಯ್ಯ ಕಾಂಗ್ರೆಸ್ ಸೇರ್ಪಡೆ: ಕೈಗೆ ಯುವ ನಾಯಕರ ಬಲ?




ಗುಜರಾತ್ ಸಹಿತ ಮಹತ್ವದ ರಾಜ್ಯಗಳ ವಿಧಾನಸಭೆಗೆ ರಾಜಕೀಯ ಅಂಗಣ ಸಜ್ಜಾಗಿರುವಂತೆಯೇ ಕಾಂಗ್ರೆಸ್‌ ಯುವ ನಾಯಕತ್ವ ಹುರಿಗೊಳಿಸಲು ಪ್ರಭಾವಿ ಯುವ ನಾಯಕರಿಗೆ ಗಾಳ ಹಾಕಿದೆ.



ಇದರ ಫಲವಾಗಿ, ಕಮ್ಯುನಿಸ್ಟ್ ಯುವ ನಾಯಕ ಕನ್ನಯ್ಯ ಕುಮಾರ್, ಜಿಗ್ನೇಶ್ ಮೇವಾನಿ ಸಹಿತ ಹಲವು ಯುವ ನಾಯಕರು ಕಾಂಗ್ರೆಸ್‌ಗೆ ಬಲ ತುಂಬಲಿದ್ದಾರೆ.



ಗುಜರಾತ್‌ನ ಪಕ್ಷೇತರ ಶಾಸಕರೂ ಆಗಿರುವ ಜಿಗ್ನೇಶ್ ಮೇವಾನಿ ಮತ್ತು ಪ್ರತಿಷ್ಠಿತ ಜೆಎನ್‌ಯು ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್ ಮಂಗಳವಾರ ಕೈ ಪಾಳಯ ಸೇರ್ಪಡೆಯಾಗಲಿದ್ದಾರೆ. ಈ ವಿಷಯವನ್ನು ಸ್ವತಃ ಜಿಗ್ನೇಶ್ ದೃಢಪಡಿಸಿದ್ದಾರೆ.



ಜಿಗ್ನೇಶ್ ಮತ್ತು ಕನ್ನಯ್ಯ ಸೇರ್ಪಡೆಯನ್ನು ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಸ್ವಾಗತಿಸಿದ್ದಾರೆ. ಮತ್ತು ಈ ಮಹತ್ವದ ಬೆಳವಣಿಗೆ ಹಿಂದೆ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಮಧ್ಯಸ್ಥಿಕೆ ಇದೆ ಎನ್ನಲಾಗಿದೆ.




ಜಿಗ್ನೇಶ್ ಅವರಿಗೆ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಇನ್ನು ಕನ್ನಯ್ಯ ಕುಮಾರ್ ಅವರಿಗೆ ಪಕ್ಷದ ಪ್ರಮುಖ ರಾಷ್ಟ್ರೀಯ ಜವಾಬ್ದಾರಿಯನ್ನು ನೀಡಲು ಕೈ ನಾಯಕತ್ವ ನಿರ್ಧರಿಸಿದೆ. ಜೊತೆಗೆ ಬಿಹಾರದಲ್ಲಿ ಪಕ್ಷದ ಏಳಿಗೆಗಾಗಿ ಅವರ ಸೇವೆಯನ್ನು ಬಳಸಿಕೊಳ್ಳಲಿದೆ.



ಇದೆಲ್ಲವೂ 2022ರ ವಿವಿಧ ರಾಜ್ಯಗಳ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಮುಖ್ಯ ಭೂಮಿಕೆಯನ್ನು ನಿರ್ಮಿಸಿಕೊಡಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ಸಂತಸದಿಂದ ಅಭಿಪ್ರಾಯಪಟ್ಟಿದ್ದಾರೆ.


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article