-->
ಮದುವೆಯಾದ ಒಂದೇ ತಿಂಗಳಿಗೆ ಅನುಮಾನದ ಪಿಶಾಚಿ ಪತಿಯಿಂದ ದುರಂತ ಅಂತ್ಯಕಂಡಳು ಪತ್ನಿ: ಸಾಫ್ಟ್‌ವೇರ್ ಗಂಡನ ಪೈಶಾಚಿಕ ಕೃತ್ಯ!

ಮದುವೆಯಾದ ಒಂದೇ ತಿಂಗಳಿಗೆ ಅನುಮಾನದ ಪಿಶಾಚಿ ಪತಿಯಿಂದ ದುರಂತ ಅಂತ್ಯಕಂಡಳು ಪತ್ನಿ: ಸಾಫ್ಟ್‌ವೇರ್ ಗಂಡನ ಪೈಶಾಚಿಕ ಕೃತ್ಯ!

ತೆಲಂಗಾಣ: ಅನುಮಾನದ ಪಿಶಾಚಿ ಸಾಫ್ಟ್‌ವೇರ್ ಪತಿಯೋರ್ವನು ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯನ್ನು ಚೂರಿಯಿಂದ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮೇಡ್ಚಲ್-ಮಲ್ಕಾಜಗಿರಿ ಜಿಲ್ಲೆಯ ಬಚುಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಕಾಮರೆಡ್ಡಿ ಜಿಲ್ಲೆಯ ತಿಮ್ಮಾಪ್ಪೂರ್​ ಗ್ರಾಮದ ಮೂಲದವಳಾದ ಸುಧಾರಾಣಿ ಕೊಲೆಯಾದ ನವವಿವಾಹಿತೆ. ಸಾಫ್ಟ್​ವೇರ್​ ಇಂಜಿನಿಯರ್​ ಪತಿ ಕಿರಣ್​ ಕುಮಾರ್​ ಕೊಲೆಗೈದ ಆರೋಪಿ.

ಮದುವೆಯಾದ ಕೇವಲ‌ 28 ದಿನಕ್ಕೆ ಆಕೆ ದುರಂತ ಅಂತ್ಯ ಕಂಡಿರೋದು ಅತ್ಯಂತ ದುರಾದೃಷ್ಟಕರ. ಸುಧಾರಾಣಿಯನ್ನು ಸಾಫ್ಟ್​ವೇರ್​ ಇಂಜಿನಿಯರ್​ ಉದ್ಯೋಗಿ ಕಿರಣ್​ ಕುಮಾರ್​ ಗೆ ವಿವಾಹ ಮಾಡಿಕೊಡಲಾಗಿತ್ತು. ಈತ ಹೈದರಾಬಾದ್​ನ ಪ್ರಗತಿ ನಗರದ ಶ್ರೀಶೈದ್ವಾರಕ ಅಪಾರ್ಟ್ಮೆಂಟ್​ನಲ್ಲಿ ಫ್ಲ್ಯಾಟ್​ ನಲ್ಲಿ ವಾಸ್ತವ್ಯವಿದ್ದನು. ಅದೇ ಮನೆಯಲ್ಲಿ ಆತ ಪತ್ನಿಯನ್ನು ಕೊಲೆಗೈದಿದ್ದ. 

ಮಗಳನ್ನು ನೋಡಲು  ಹೈದರಾಬಾದ್​ಗೆ ಬಂದ ಸುಧಾರಣಿ ಪಾಲಕರು ಶನಿವಾರ 3.30ರ ಸುಮಾರಿಗೆ ಪ್ರಗತಿ ನಗರದ ಅಳಿಯ ಅಪಾರ್ಟ್‌ಮೆಂಟ್ ಗೆ ಬಂದಿದ್ದಾರೆ. ಆದರೆ ಕಾಲಿಂಗ್ ಬೆಲ್​ ಮಾಡಿದರೂ ಯಾರೂ ಬಾಗಿಲು ತೆರೆಯದಿರುವುದನ್ನು ಕಂಡು ಮಗಳ ಮೊಬೈಲ್​ ಫೋನ್ ​ಗೆ ಕರೆ ಮಾಡಿದ್ದಾರೆ. ಆದರೆ ಮಗಳ ಕರೆ ಸ್ವೀಕರಿಸದಿರುವುದಿರುವುದರಿಂದ ಪಾಲಕರು ಅನುಮಾನಗೊಂಡು ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ. 

ಪೊಲೀಸರು ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಸುಧಾರಾಣಿ ಕತ್ತು ಕೊಯ್ದುಕೊಂಡು ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಳು. ಕಿರಣ್​ ಕೂಡ ಕೂಡಾ ಕತ್ತು ಸೀಳಿಕೊಂಡು ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿದ್ದ. ತಕ್ಷಣ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪತ್ನಿ‌ ಸುಧಾರಾಣಿಯ ಕತ್ತು, ಕಾಲು ಮತ್ತು ತೋಳುಗಳಿಗೆ​ ಚಾಕುವಿನಿಂದ ಇರಿದು ಪತಿ ಕಿರಣ್ ಕೊಲೆ ಮಾಡಿದ್ದಾನೆ.  

ಎರಡು ವಾರಗಳ ಹಿಂದಷ್ಟೇ ಈ ಅಪಾರ್ಟ್​ಮೆಂಟ್​ಗೆ ಶಿಫ್ಟ್ ಆಗಿದ್ದರು. ಆಗಿನಿಂದಲೂ ಅವರಿಬ್ಬರೂ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ, ಬೆರೆಯುತ್ತಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. 

ಶನಿವಾರ ಮಧ್ಯಾಹ್ನ 2 ರಿಂದ 3 ಗಂಟೆ ಸುಮಾರಿಗೆ ಸುಧಾರಾಣಿಯನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಬಳಿಕ‌ ಆಕೆಯ ಹೆತ್ತವರು ತನ್ನನ್ನು ಬಿಡುವುದಿಲ್ಲ ಎಂದು ಕಿರಣ್​ ತಾನು ಕೂಡ ಕತ್ತು ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಆತನ ಸ್ಥಿತಿ ಸುಧಾರಿಸಿದೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದು, ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಆನ್​ಲೈನ್ ಮೂಲಕ ವಿಶೇಷ ಚಾಕುವನ್ನು ಕಿರಣ್ ಕುಮಾರ್ ಖರೀದಿ ಮಾಡಿದ್ದ ಎಂಬ ಭಯಾನಕ ಮಾಹಿತಿ ಹೊರ ಬಂದಿದೆ. ಕೊಲೆಯ ಹಿಂದಿನ ದಿನ ಅದನ್ನು ಪಡೆದುಕೊಂಡಿರುವ ಕಿರಣ್​, ಅದೇ ಚಾಕುವಿನಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ತನಿಖೆ ಇನ್ನೂ ಮುಂದುವರಿದಿದ್ದು ಇನ್ನಷ್ಟು ಸ್ಪೋಟಕ ಮಾಹಿತಿ ಹೊರ ಬೀಳಲಿದೆ.

Ads on article

Advertise in articles 1

advertising articles 2

Advertise under the article