
ಕನ್ನಡದ ಕಿರುತೆರೆ ನಟಿ 25 ವರ್ಷದ ಸೌಜನ್ಯ ಆತ್ಮಹತ್ಯೆ
ಬೆಂಗಳೂರು: ಕನ್ನಡ ಕಿರುತೆರೆಗಳಲ್ಲಿ ಪಾತ್ರ ನಿರ್ವಹಿಸುತ್ತಿದ್ದ ನಟಿ ಸೌಜನ್ಯ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸೌಜನ್ಯ ಅವರು ಡೆತ್
ನೋಟ್ ಬರೆದಿಟ್ಟು ಬೆಂಗಳೂರಿನ ದೊಡ್ಡಬೆಲೆ ಗ್ರಾಮದಲ್ಲಿ
ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ದೊಡ್ಡಬೆಲೆಯ ಕುಂಬಳಗೋಡು ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ತಮ್ಮ ಪಿಎ ಗೆ ತಿಂಡಿ ತರುವಂತೆ ತಿಳಿಸಿ
ಅವರನ್ನು ಹೊರಕಳುಹಿಸಿ ಮನೆಯಲ್ಲಿ ಆತ್ಮಹತ್ಯೆ ಮಾಡಿದ್ದಾರೆ.
ಸೌಜನ್ಯ ಅವರು ಬರೆದಿರುವ ಡೆತ್ ನೋಟ್ ಸಿಕ್ಕಿದ್ದು ಇದರಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನೇ ಕಾರಣ ಎಂದು
ಬರೆದಿದ್ದಾರೆ.
ಕೊಡಗು ಜಿಲ್ಲೆಯ ಮೂಲದವರಾಗಿರುವ ಸೌಜನ್ಯ ಕನ್ನಡದ ಚೌಕಟ್ಟು, ಫನ್ ಎಂಬ
ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಕುಂಬಳಗೋಡು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ