SHOCKING NEWS: 24 ವರ್ಷದ ಗರ್ಭಿಣಿಯ ಸಾಮೂಹಿಕ ಅತ್ಯಾಚಾರಗೈದು ರೈಲ್ವೆ ಹಳಿಗೆ ಎಸೆದ ಕಾಮುಕರು!

 


ಪಾಟ್ನಾಬಿಹಾರ : 24 ವರ್ಷದ ಗರ್ಭಿಣಿಯೊಬ್ಬಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರಗೈದು ರೈಲ್ವೆ ಹಳಿಯಲ್ಲಿ ಬಿಸಾಡಿ ಹೋಗಿರುವ ಘಟನೆ ಘಟನೆ ಬಿಹಾರ ರಾಜ್ಯದ ಪಾಟ್ನಾದಲ್ಲಿ ನಡೆದಿದೆ.

 

 

ಪಾಟ್ನಾ ರೈಲ್ವೆ ಜಂಕ್ಷನ್ ನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಈ ಮಹಿಳೆ ಪತ್ತೆಯಾಗಿದ್ದಾರೆ. ಈಕೆ ಗರ್ಭಿಣಿಯಾಗಿದ್ದು ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕಾಮುಕರು ಪರಾರಿಯಾಗಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನ ಪಾಟ್ನಾ ರೈಲ್ವೆ ಜಂಕ್ಷನ್​​ನ ಹಳಿ ​ ಮೇಲೆ ಎಸೆದು  ಇವರು ಪರಾರಿಯಾಗಿದ್ದಾರೆ.

 

ಘಟನೆಗೆ ಸಂಬಂಧಿಸಿದಂತೆ ಪಾಟ್ನಾ ಪೊಲೀಸರು  ಎಫ್​ಐಆರ್​ ದಾಖಲು ಮಾಡಿಕೊಂಡಿದ್ದಾರೆ. ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಇಬ್ಬರನ್ನು  ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಶನಿವಾರ ರಾತ್ರಿ ಊಟ ಮಾಡಿದ ಬಳಿಕ ಗರ್ಭಿಣಿ ಮನೆ ಬಳಿ ವಾಕ್​ ಮಾಡುತ್ತಿದ್ದ ವೇಳೆ ಇಬ್ಬರು ಯುವಕರು ಈಕೆಯ ಬಳಿ ಬಂದು ಅನುಚಿತವಾಗಿ ವರ್ತಿಸಿದ್ದಾರೆ. ಬಳಿಕ ಆಕೆಯನ್ನು ಎತ್ತಿಕೊಂಡು ಹೋಗಿ   ಹೊಲದಲ್ಲಿ ಅತ್ಯಾಚಾರವೆಸಗಿದ್ದಾರೆ.ಈ ವೇಳೆ ಇನ್ನೋರ್ವ ಈ  ಕಾಮುಕರ ಜೊತೆಗೆ ಸೇರಿಕೊಂಡಿದ್ದಾನೆ.

 

ಗರ್ಭಿಣಿ ಮಹಿಳೆ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಲಾಗಿದ್ದು  ಇದರಿಂದ ಆಕೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಅತ್ಯಾಚಾರಗೈದ ಬಳಿಕ ಈಕೆಯನ್ನು ರೈಲ್ವೆ ಟ್ರ್ಯಾಕ್ ನಲ್ಲಿ ಎಸೆದು ಪರಾರಿಯಾಗಿದ್ದಾರೆ.  

 

ಪ್ರಜ್ಞೆ ಬಂದ ಬಳಿಕ ಮಹಿಳೆ ಕಿರುಚಾಡಿದ್ದು ಅದನ್ನು ಕಂಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಕೆಯನ್ನು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.   ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆಸಿರುವುದು ದೃಢಪಟ್ಟಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳ ಬಂಧನ ಮಾಡಿದ್ದಾರೆ.  ತಲೆ ಮರೆಸಿಕೊಂಡಿರುವ ಇನ್ನೋರ್ವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.