-->
ಬಿಗ್ ಬಾಸ್ ನಲ್ಲಿ ಗರ್ಲ್​ಫ್ರೆಂಡ್​ ಹೆಸರು ರಿವಿಲ್ ಮಾಡಿದ ಯೂಟ್ಯೂಬರ್ 'ಶನ್ನು'

ಬಿಗ್ ಬಾಸ್ ನಲ್ಲಿ ಗರ್ಲ್​ಫ್ರೆಂಡ್​ ಹೆಸರು ರಿವಿಲ್ ಮಾಡಿದ ಯೂಟ್ಯೂಬರ್ 'ಶನ್ನು'

ಹೈದರಾಬಾದ್​: ಯೂಟ್ಯೂಬ್ ನಲ್ಲಿ ಭಾರೀ ಸಂಚಲನ ಮೂಡಿಸುತ್ತಿರುವ ಷಣ್ಮುಖ ಜಸ್ವಂತ್ ಅಲಿಯಾಸ್​ ಶನ್ನು ತೆಲುಗಿನವರಿಗೆ ತುಂಬಾ ಪರಿಚಿತ. 4 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಇವರು ಪ್ರಸ್ತುತ ತೆಲುಗು ಬಿಗ್​ಬಾಸ್​ ಸಿಸನ್​ 5ರ ಸ್ಪರ್ಧಿಯಾಗಿದ್ದಾರೆ. 

ಕಿರುಚಿತ್ರ, ನೃತ್ಯದ​ ವೀಡಿಯೋ ಮೂಲಕ ಶನ್ನು ಬಹಳ ಪ್ರಸಿದ್ಧಿ ಪಡೆದಿರುವ ಶನ್ನು "ಅರೇ ಎಂಟ್ರಾ ಇಧಿ…" ಡೈಲಾಗ್​ ಅಂತೂ ಸಿಕ್ಕಾಪಟ್ಟೆ ಫೇಮಸ್​. ಬಿಗ್​ಬಾಸ್​ ವೇದಿಕೆಯಲ್ಲಿ  ಸ್ವತಃ ನಾಗಾರ್ಜುನ್​ ಕೂಡ ಡೈಲಾಗ್​ ಹೇಳಿದ್ದರು.​ ಇತ್ತೀಚೆಗೆ ಶನ್ನು ಡ್ರಂಕ್​ ಆ್ಯಂಡ್​ ಡ್ರೈವ್​ ಆ್ಯಕ್ಸಿಡೆಂಟ್ ನಿಂದಲೂ ಸುದ್ದಿಯಾಗಿದ್ದರು. ಸದ್ಯ ಬಿಗ್​ಬಾಸ್​ಗೆ ಸ್ಪರ್ಧಿಯಾಗಿರುವ ಶನ್ನು ತಮ್ಮ ಗರ್ಲ್​ಫ್ರೆಂಡ್​ ಹೆಸರನ್ನು ರಿವಿಲ್ ಮಾಡಿದ್ದಾರೆ.  

ಶನ್ನು ಕಳೆದ ಶನಿವಾರ ಬಿಗ್ ಬಾಸ್ ನಲ್ಲಿ ತಮ್ಮ ಗರ್ಲ್​ಫ್ರೆಂಡ್​ ಹೆಸರನ್ನು ಬಹಿರಂಗಪಡಿಸಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ಬಿಗ್ ಬಾಸ್ 2ನೇ ಆವೃತ್ತಿಯ ಸ್ಪರ್ಧಿ ದೀಪ್ತಿ ಸುನೈನಾ. 

ಶನ್ನು ಹಾಗೂ ದೀಪ್ತಿ ಸುನೈನಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಖ್ಯಾತ ಜೋಡಿಯಾಗಿದ್ದಾರೆ. ಇವರಿಬ್ಬರು ಒಟ್ಟಿಗೆ ಅನೇಕ ಡ್ಯಾನ್ಸ್​ ವೀಡಿಯೋಗಳನ್ನು ಮಾಡಿದ್ದಾರೆ. ಅಲ್ಲದೆ ಅನೇಕ ಕಿರುಚಿತ್ರಗಳಲ್ಲೂ ಜೊತೆಯಾಗಿ ನಟಿಸಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಯಲ್ಲಿ ಬಿದ್ದಿರುವುದು ಎಲ್ಲರಿಗೂ ತಿಳಿದಿದೆ. ಬಿಗ್​ಬಾಸ್ ಗೆ 5ನೇ ಆವೃತ್ತಿಗೆ ಶನ್ನು ಹೋದ ಸಂದರ್ಭ ದೀಪ್ತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಭಾವನಾತ್ಮಕ ಬರಹವನ್ನು ಬರೆದುಕೊಂಡಿದ್ದರು. ಟಿವಿಯಲ್ಲಿ ನಿನ್ನನ್ನು ಪ್ರತಿದಿನ ನೋಡಲು ಹೆಮ್ಮೆಯಾಗುತ್ತದೆ. ಇನ್ನು ಕಾಯಲು ಸಾಧ್ಯವಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿನಗಾಗಿಯೇ ಇರುತ್ತೇನೆಂದು ಬರೆದುಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article

holige copy 1.jpg