-->
Job in Sports Authority of India(SAI)- ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ 220 ಹುದ್ದೆ- ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Job in Sports Authority of India(SAI)- ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ 220 ಹುದ್ದೆ- ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಸ್ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾ(SAI)ನಲ್ಲಿ ಸಹಾಯಕ ಕೋಚ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ SAI ಅಧಿಸೂಚನೆ ಹೊರಡಿಸಿದೆ.


ನೇಮಕಾತಿ ಮಾಡಿಕೊಳ್ಳಲಾಗುವ ಸಹಾಯಕ ಕೋಚ್‌ ಹುದ್ದೆ ಆರಂಭದಲ್ಲಿ ನಾಲ್ಕು ವರ್ಷಗಳ ಒಪ್ಪಂದಕ್ಕೆ ಒಳಪಟ್ಟಿರುತ್ತದೆ. ಪ್ರತಿವರ್ಷ ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಈ ಅವಧಿ ವಿಸ್ತರಿಸುವ ಸಾಧ್ಯತೆ ಇದೆ.


ಒಟ್ಟು ಹುದ್ದೆಗಳ ಸಂಖ್ಯೆ : 220 ಹುದ್ದೆಗಳು


ಸಾಮಾನ್ಯ ಅಭ್ಯರ್ಥಿಗಳಿಗೆ 90 ಹುದ್ದೆ

ಪರಿಶಿಷ್ಟ ಜಾತಿಗೆ 33 ಹುದ್ದೆ,

ಪರಿಶಿಷ್ಟ ಪಂಗಡಕ್ಕೆ 16 ಹುದ್ದೆ

ಇತರ ಹಿಂದುಳಿದ ವರ್ಗಕ್ಕೆ 59 ಹುದ್ದೆ

ಆರ್ಥಿಕ ದುರ್ಬಲ ಅಭ್ಯರ್ಥಿಗಳಿಗೆ- 22 ಹುದ್ದೆಯಾವ ಕ್ರೀಡಾ ವಿಭಾಗಗಳಲ್ಲಿ ಹುದ್ದೆ ಖಾಲಿ ಇದೆ...?


ಬಿಲ್ಗಾರಿಕೆ (ಆರ್ಚರಿ) - 13

ಅಥ್ಲೆಟಿಕ್ಸ್ - 20

ಬಾಸ್ಕೆಟ್ ಬಾಲ್ - 6

ಬಾಕ್ಸಿಂಗ್ - 13

ಸೈಕ್ಲಿಂಗ್ - 13

ಫೆನ್ಸಿಂಗ್ - 13

ಫುಟ್ಬಾಲ್ - 10

ಜಿಮ್ನಾಸ್ಟಿಕ್ - 6

ಹ್ಯಾಂಡ್ ಬಾಲ್ - 3

ಹಾಕಿ - 13

ಜ್ಯೂಡೋ - 13

ಕಬಡ್ಡಿ - 5

ಕರಾಟೆ - 4

ಕಯಾಕಿಂಗ್ ಆಂಡ್ ಕನೋಯಿಂಗ್ -6

ಖೋ ಖೋ - 2

ರೋಯಿಂಗ್ - 13

ಸೆಪಕ್ ಟಕ್ರಾ - 5

ಸ್ಟಾಫ್ಟ್ ಬಾಲ್ -1

ಈಜು - 7

ಟೇಬಲ್ ಟೆನಿಸ್ - 7

ಟೇಕ್ವಾಂಡೋ - 6

ವಾಲಿಬಾಲ್ - 6

ಭಾರ ಎತ್ತುವಿಕೆ - 13

ಕುಸ್ತಿ - 13

ವುಶು - 06


ವಿದ್ಯಾರ್ಹತೆ :


ಎಸ್‌ಎಐ., ಎನ್‌ಎಸ್‌, ಎನ್‌ಐಸ್‌ ಅಥವಾ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕೋಚಿಂಗ್ ಡಿಪ್ಲೊಮಾ ಪಡೆದಿರಬೇಕು.


ಅಥವಾ


ಒಲಿಂಪಿಕ್ ಯಾ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಂಡಿರಬೇಕು.


ಅಥವಾ


ದ್ರೋಣಾಚಾರ್ಯ ಪ್ರಶಸ್ತಿ ಪಡೆದಿರಬೇಕು.


ವೇತನ; ಮಾಸಿಕ 41,420 ರೂ ನಿಂದ 1,12,400 ರೂ.


ಆಯ್ಕೆ ಪ್ರಕ್ರಿಯೆ ಹೇಗೆ...: 


ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ

ಸಂದರ್ಶನದ ದಿನ, ಸ್ಥಳ, ಸಮಯವನ್ನು ಭಾರತೀಯ ಕ್ರೀಡಾ ಪ್ರಾಧಿಕಾರ( SAI) ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.


ಅರ್ಜಿ ಸಲ್ಲಿಸಲು ಕೊನೇ ದಿನ 10-10-2021

For details click this link:

https://sportsauthorityofindia.nic.in/saijobs/
Ads on article

Advertise in articles 1

advertising articles 2

Advertise under the article