ವಿಜಯಪುರ: ರಾಜ್ಯದಲ್ಲಿ ನಿತ್ಯವೂ ಒಂದಿಲ್ಲೊಂದು ಕಡೆಗಳಲ್ಲಿ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಪ್ರಾಪ್ತೆಯರನ್ನೂ ಬಿಡದೆ ಕಾಮುಕರು ಅತ್ಯಾಚಾರ ಎಸಗುತ್ತಿರುವುದು ಕಂಡು ಬರುತ್ತಿದೆ. ಇದೀಗ ವಿಜಯಪುರ ಜಿಲ್ಲೆಯಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕೂಡ್ಲಿಗಿ ನಿವಾಸಿ ಕಟ್ಟಡ ಕಾರ್ಮಿಕನಾದ ಸಂತೋಷ್ ಎಂಬ ಆರೋಪಿ ಅಪ್ರಾಪ್ತೆಯೋರ್ವಳನ್ನು ಪುಸಲಾಯಿಸಿ ಪ್ರೀತಿ-ಪ್ರೇಮದ ಬಲೆಗೆ ಬೀಳಿಸಿದ್ದಾನೆ. ಅಲ್ಲದೆ ಆಕೆಯನ್ನೇ ವಿವಾಹವಾಗುವುದಾಗಿ ನಂಬಿಸಿದ್ದಾನೆ. ಆಟವಾಡಿಕೊಂಡಿರಬೇಕಿದ್ದ ವಯಸ್ಸಿನ ಬಾಲಕಿಯ ಜೊತೆಗೆ ಬಲವಂತವಾಗಿ ಲೈಂಗಿಕ ಸಂಪರ್ಕವನ್ನೂ ಬೆಳೆಸಿದ್ದಾನೆ. ಪ್ರಕರಣ ಬೆಳಕಿಗೆ ಬಂದು ಪೊಲೀಸ್ ದೂರು ದಾಖಲು ಆಗುತ್ತಿರುವಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಇದೀಗ ಆರೋಪಿ ಸಂತೋಷ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಈ ಬಗ್ಗೆ ಕೂಡ್ಲಿಗಿ ತಾಲೂಕಿನ ಕಾನಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.