ಬಟ್ಟೆ ಬದಲಾಯಿಸೋ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿ ಅಪ್ರಾಪ್ತೆಯ ಅತ್ಯಾಚಾರ: ದುಷ್ಕರ್ಮಿಗಳು ಅರೆಸ್ಟ್

ಚಿಕ್ಕಮಗಳೂರು: ಅಪ್ರಾಪ್ತೆಯ ಬಟ್ಟೆ ಬದಲಾಯಿಸುವ ವೀಡಿಯೋ ಚಿತ್ರೀಕರಣ ಮಾಡಿರುವ ದುಷ್ಕರ್ಮಿಗಳು ಅದನ್ನು ಆಕೆಗೆ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿರುವ ಬಗ್ಗೆ ಚಿಕ್ಕಮಗಳೂರು ಜಿಲ್ಲೆಯ ಸಖರಾಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಅವರು ಕರೆದಾಗಲೆಲ್ಲಾ ಬರಬೇಕೆಂದು ತಾಕೀತು ಮಾಡುತ್ತಿದ್ದರು. ಒಂದು ವೇಳೆ ಬರದಿದ್ದಲ್ಲಿ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಇವರ ಕಿರುಕುಳ ತಡೆಯಲಾರದೆ ಬಾಲಕಿ ಇದೀಗ ದೂರು ದಾಖಲಿಸಿದ್ದಾಳೆ. 

ಓರ್ವ ಆರೋಪಿ ವೀಡಿಯೋ ಮಾಡಿದ್ದು, ಆತನ ಕೃತ್ಯಕ್ಕೆ ಬೆಂಬಲ ನೀಡಿ ಆತನೂ ಜೊತೆ ಸೇರಿ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ ಆಕೆಯ ಬಟ್ಟೆ ಬದಲಾಯಿಸುವ ವೀಡಿಯೋ ನೋಡಿರುವ ಮತ್ತೀರ್ವರು ಈಕೆಗೆ ತೊಂದರೆ ಕೊಡಲು ಆರಂಭಿಸಿದ್ದರು. 

ಇದರಿಂದ ಬೇಸತ್ತು ಬಾಲಕಿ ಪೊಲೀಸ್ ದೂರು ನೀಡಿದ್ದಾಳೆ‌. ತಕ್ಷಣ ಕ್ರಮಕೈಗೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.