ದಕ್ಷಿಣ ಪೂರ್ವ ರೇಲ್ವೇಸ್‌ನಲ್ಲಿ ಉದ್ಯೋಗಾವಕಾಶ: SSLC, PUC, ITI ಆದವರಿಗೆ 483 ಹುದ್ದೆ
ದಕ್ಷಿಣ ಪೂರ್ವ ರೈಲ್ವೇ ವಿಭಾಗದಲ್ಲಿ ಖಾಲಿ ಇರುವ ಟ್ರೇಡ್ ಅಪ್ರೆಂಟಿಸ್‌ಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.
SSLC, PUC, ITI ಪಾಸ್ ಆದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 483 ಹುದ್ದೆ ಖಾಲಿ ಇದ್ದು, ನೇರ ನೇಮಕಾತಿಗೆ ರೈಲ್ವೇ ಇಲಾಖೆ ಮುಂದಾಗಿದೆ.
ಹುದ್ದೆಗಳ ವಿವರ
1. ಫಿಟ್ಟರ್
2 ಟರ್ನರ್
3 ಎಲೆಕ್ಟ್ರಿಷನ್
4 ಮೆಕ್ಯಾನಿಕ್
5 ಪ್ಲಬಂರ್
6 ಪೈಂಟರ್
ಒಟ್ಟು ಹುದ್ದೆಗಳು: 483 ಹುದ್ದೆಗಳು
ವಿದ್ಯಾರ್ಹತೆ: ಆಯಾ ಹುದ್ದೆಗೆ ಅನುಗುಣವಾಗಿ SSLC, PUC & ITI
ತರಬೇತಿ ಭತ್ಯೆ: ಭಾರತ ಸರ್ಕಾರದ ನಿಯಮಗಳ ಪ್ರಕಾರ ತರಬೇತಿ ಭತ್ಯೆ ನೀಡಲಾಗುತ್ತದೆ.
ವಯೋಮಿತಿ: ಅಕ್ಟೋಬರ್ 2021ಕ್ಕೆ ಅನ್ವಯವಾಗುವಂತೆ ಕನಿಷ್ಟ 15 ಗರಿಷ್ಟ 24 ವರ್ಷದವರಾಗಿರಬೇಕು. ಎಸ್‌ಸಿ, ಎಸ್ಟಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇದೆ.
ನೇಮಕಾತಿ ವಿಧಾನ
SSLC ಹಾಗೂ ITIನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿ ನೇರ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ದಕ್ಷಿಣ ಪೂರ್ವ ರೇಲ್ವೇಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಮಾಹಿತಿ ಪಡೆಯಬಹುದು. ಇತರ ವಿಧಾನದಲ್ಲಿ ಹಾಕಲಾದ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05/10/2021
Website Link: https://secr.indianrailways.gov.in/
Notification Link is herebelow;
https://secr.indianrailways.gov.in/uploads/files/1631778883923-act%20apprentice.pdf
