ದಕ್ಷಿಣ ಕನ್ನಡ; ನೀರು ಎಂದು ಪೆಟ್ರೋಲ್ ಕುಡಿದು ಅಜ್ಜಿ ಸಾವು


ಮಂಗಳೂರು;  ನೀರು ಎಂದು  ಬಾಟಲಿಯಲ್ಲಿದ್ದ ಪೆಟ್ರೋಲ್​ ಅನ್ನು  ಕುಡಿದು ಅಜ್ಜಿಯೊಬ್ಬರು ಮೃತಪಟ್ಟ ಘಟನೆ ಉಪ್ಪಿನಂಗಡಿಯ ಪೆರ್ನೆ ಸಂಪದಕೋಡಿಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ 79 ವರ್ಷದ  ಪದ್ಮಾವತಿ ಮೃತಪಟ್ಟವರು. ಇವರು ರವಿವಾರ  ಪೆರ್ನೆಯಲ್ಲಿರುವ ಮಗಳ ಮನೆಗೆ  ಬಂದಿದ್ದರು. 

ಇಲ್ಲಿ ಮನೆಯವರು ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ಬಾಟಲಿಯಲ್ಲಿ ಪೆಟ್ರೋಲ್​ ತಂದಿಟ್ಟಿದ್ದರು. ಇದನ್ನು ನೀರು ಎಂದು ಅಜ್ಜಿ ಕುಡಿದಿದ್ದಾರೆ. ಅಜ್ಜಿಯವರಿಗೆ ಕಣ್ಣಿನ ದೋಷ ಇತ್ತೆಂದು ಹೇಳಲಾಗಿದೆ.

ಪೆಟ್ರೋಲ್ ಕುಡಿದು ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.