-->
ನಟಿ ಪಾಯಲ್ ಘೋಷ್ ಮೇಲೆ ಆ್ಯಸಿಡ್ ದಾಳಿಗೆ ಯತ್ನ: ವೀಡಿಯೋ ಮಾಡಿ ತಿಳಿಸಿದ ನಟಿ

ನಟಿ ಪಾಯಲ್ ಘೋಷ್ ಮೇಲೆ ಆ್ಯಸಿಡ್ ದಾಳಿಗೆ ಯತ್ನ: ವೀಡಿಯೋ ಮಾಡಿ ತಿಳಿಸಿದ ನಟಿ

ಮುಂಬೈ: 'ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಆ್ಯಸಿಡ್ ದಾಳಿ ಮಾಡಲು ಯತ್ನಿಸಿದೆ' ಎಂದು ನಟಿ ಪಾಯಲ್ ಘೋಷ್ ವೀಡಿಯೋ ಮಾಡಿ ಹೇಳಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

'ಮೆಡಿಕಲ್ ಶಾಪ್ ಗೆಂದು ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ತೆರಳಿದ್ದ ನಾನು ಮೆಡಿಷನ್ ಪಡೆದು ಕಾರು ಹತ್ತುತ್ತಿದೆ‌. ಈ ಸಂದರ್ಭ ಬೈಕ್‍ ನಲ್ಲಿ ಆಗಮಿಸಿದ ಆಗಂತುಕ ಮುಸುಕುಧಾರಿಗಳ ಗುಂಪೊಂದು ನನ್ನ ಮೇಲೆ ಕಬ್ಬಿಣದ ರಾಡ್‍ನಿಂದ ದಾಳಿ ನಡೆಸಲು ಮುಂದಾಗಿದ್ದಾರೆ. ಅಲ್ಲದೆ ಅವರ ಕೈಯಲ್ಲಿ ಬಾಟಲ್‍ವೊಂದಿದ್ದು,  ಬಹುಶಃ ಅದರಲ್ಲಿ ಆ್ಯಸಿಡ್ ಇತ್ತು ಎನ್ನುವುದು ನನ್ನ ಅನುಮಾನ. ನಾನು ಅವರಿಂದ ತಪ್ಪಿಸಿಕೊಂಡು ಪಾರಾದೆ. ಈ ವೇಳೆ ನನ್ನ ಕೈಗೆ ಸ್ವಲ್ಪ ಗಾಯವಾಗಿದೆ' ಎಂದು ವೀಡಿಯೋದಲ್ಲಿ ಪಾಯಲ್ ಘೋಷ್ ಹೇಳಿಕೊಂಡಿದ್ದಾರೆ.


 ಮುಸುಕುಧಾರಿಗಳ ಗುಂಪು ನನ್ನತ್ತ ಧಾವಿಸಿದ ಸಂದರ್ಭ ಅಪಾಯದ ಮುನ್ಸೂಚನೆ ಅರಿತು ನಾನು ಜೋರಾಗಿ ಕೂಗಿಕೊಂಡೆ. ಇದರಿಂದ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ದಾಖಲಿಸುತ್ತೇನೆ ಎಂದು ಪಾಯಲ್ ಘೋಷ್ ಹೇಳಿದ್ದಾರೆ.

ಈ ಹಿಂದೆ ಪಾಯಲ್ ಘೋಷ್ ಖ್ಯಾತ ಬಾಲಿವುಡ್ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಇದರಿಂದ ಬಾಲಿವುಡ್ ನಲ್ಲಿ ಸಂಚಲನ ಉಂಟಾಗಿತ್ತು. ಟಾಲಿವುಡ್ ನಟ ಜ್ಯೂ.ಎನ್‍ಟಿಆರ್ ಬಗ್ಗೆಯೂ ಈ ನಟಿ ಮಾತನಾಡಿದ್ದರು. ಹಾಗೂ ಚಿತ್ರರಂಗದಲ್ಲಿ ಪಕ್ಷಪಾತ ಇದೆ ಎಂದು ಆರೋಪಿಸಿದ್ದರು.

ಮೂಲತಃ ಪಶ್ಚಿಮ ಬಂಗಾಳದವರಾಗಿರುವ ನಟಿ ಪಾಯಲ್ ಘೋಷ್ ಅನೇಕ ತೆಲುಗು, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಮುಂಬೈನಲ್ಲಿ ವಾಸವಾಗಿರುವ ಇವರು ಕಳೆದ ವರ್ಷ ಕೇಂದ್ರ ಸಚಿವ ರಾಮದಾಸ್ ಅಠವಲೆ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಗೆ ಸೇರ್ಪಡೆಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article