ಪಾರ್ಟಿಯಲ್ಲಿ ಜಾನ್ವಿ ಕಪೂರ್ ಮೋಜು ಮಸ್ತಿ: ಮಾಜಿ ಪ್ರಿಯಕರನಿಂದ ಚುಂಬಿಸಿದ ಫೋಟೋ ಗೆ ನೆಟ್ಟಿಗರು ಫಿದಾ

ಮುಂಬೈ: ಬಾಲಿವುಡ್ ನಟಿ ಜಾನ್ಹವಿ ಕಪೂರ್ ತಮ್ಮ ಸೋದರಿ ಹಾಗೂ ಸ್ನೇಹಿತರೊಂದಿಗೆ ಪಾರ್ಟಿಯೊಂದರಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಈ ಸಂದರ್ಭ ಆಕೆ ಮಾಜಿ ಪ್ರಿಯಕರ ಅಕ್ಷತ್ ರಾಜನ್ ನನ್ನು ಅಪ್ಪಿ ಹಿಡಿದಿದ್ದು, ಆತ ಕಿಸ್ ಮಾಡಿದ್ದಾನೆ. ಈ ಫೋಟೊವನ್ನು ಇದೀಗ ಜಾನ್ವಿ ಕಪೂರ್ ತಮ್ಮ ಇನ್ ಸ್ಟ್ರಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾಳೆ.


ಮಾಜಿ ಪ್ರಿಯಕರನನ್ನು ಜಾನ್ವಿ ಕಪೂರ್ ಬಿಗಿದಪ್ಪಿದ್ದು, ಆತ ಆಕೆಯನ್ನು ಕಿಸ್ ಮಾಡಿರುವ ಫೋಟೋಗಳನ್ನು ಇನ್​ಸ್ಟಾಗೆ ಅಪ್ಲೋಡ್ ಮಾಡುತ್ತಿದ್ದಂತೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಕೆಲ ದಿನಗಳ ಹಿಂದೆಷ್ಟೇ ಜಾನ್ವಿ ತಮ್ಮ ಪ್ರಿಯಕರ ಇಶಾನ್​ ಖಟ್ಟರ್​​ನಿಂದ ದೂರಾವಾಗಿದ್ದಾರೆ‌‌. ಈಗ ಆತನೊಂದಿಗೇ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ವದಂತಿಗಳು ಸಹ ಹಬ್ಬಿವೆ.

ಸದ್ಯ ಜಾನ್ವಿ ಕಪೂರ್ ಅವರು, ಆನಂದ್ ಎಲ್ ರಾಯ್ ರವರ ಕಲರ್ ಯೆಲ್ಲೋ ಪ್ರೊಡಕ್ಷನ್ಸ್ ನಿರ್ಮಾಣದ 'ಗುಡ್ ಲಕ್ ಜೆರ್ರಿ' ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ.