-->
 ಮಂಗಳೂರು ಮೂಲದ ಶಿಕ್ಷಕಿ ಜ್ಯೋತಿ ಲಕ್ಷಿ ಅವರಿಗೆ  ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ

ಮಂಗಳೂರು ಮೂಲದ ಶಿಕ್ಷಕಿ ಜ್ಯೋತಿ ಲಕ್ಷಿ ಅವರಿಗೆ ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ
ಮಂಗಳೂರು: ಮಂಗಳೂರು ಮೂಲದ ಬೆಂಗಳೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಜ್ಯೋತಿ ಲಕ್ಷ್ಮೀ ಅವರಿಗೆ ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಬೆಂಗಳೂರಿನ ಜನಸಿರಿ ತಂಡ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.  ಬೆಂಗಳೂರಿನ ಸರ್ಜಾಪುರ ಸರಕಾರಿ ಶಾಲೆಯಲ್ಲಿ ಮುಖ್ಯೊಪಾಧ್ಯಾಯರಾಗಿ ಜ್ಯೋತಿಲಕ್ಷ್ಮೀ ಅವರು ಕರ್ತವ್ಯ ನಿರ್ವಹಿಸುತ್ತಿದ್ದು  ಅವರ ಪ್ರಾಮಾಣಿಕ ಶಿಕ್ಷಣ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಬೆಂಗಳೂರಿನ ಆನೆಕಲ್ ತಾಲೂಕಿನ ಪುರಂದರ ಮಂಟಪ ನಿಸರ್ಗ ಬಡಾವಣೆಯಲ್ಲಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 


ಈ  ಸಮಾರಂಭದಲ್ಲಿ  ಹುಸ್ಕುರು ಸರ್ಕಾರಿ ಪ್ರೌಢಶಾಲೆಯ ಮುನಿರೆಡ್ಡಿ, ಮರಸೂರು ಸರಕಾರಿ ಪ್ರೌಢಶಾಲೆಯ ಭಾರತಿ ಉಗರು, ಸಬ್ದಂಗಲ ಸರಕಾರಿ ಪ್ರೌಢಶಾಲೆಯಲ್ಲಿ ಮಹದೇವಪ್ಪ, ಹೆನ್ನಾಗರ ಸರಕಾರಿ ಪ್ರೌಢಶಾಲೆಯ ಶಂಕರ್ ಚಕ್ರಸಾಲಿ, ಅತ್ತಿಬೆಲೆ ಜಯಭಾರತಿ ಕೋ ಅಪರೇಟಿವ್ ಪ್ರೌಢಶಾಲೆಯ ವೆಂಕಟೇಶ್, ಅನೇಕಲ್ ಭಾರತಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ವೆಂಕಟೇಶ್, ಅನೇಕಲ್ ಭಾರತಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ಮಂಜುಳಮ್ಮ, ಬೊಮ್ಮಸಂದ್ರ ಧರ್ಮಸಾಗರ ಪ್ರೌಢಶಾಲೆಯ ಈಶ್ವರಪ್ಪ,  ಚಂದಾಪುರ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಪುರುಷೋತ್ತಮ, ಸರ್ಜಾಪುರ ಸರ್ದಾರ್ ವಲ್ಲಭಾಯಿ ಪಟೇಲ್ ಪ್ರೌಢಶಾಲೆಯ ಪಾಪಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Ads on article

Advertise in articles 1

advertising articles 2

Advertise under the article