Job opportunity in Govt owned 'minirathna' NHPC - ದೇಶದ ಅಗ್ರಗಣ್ಯ ಹೈಡ್ರೋ ಪವರ್ ಕಂಪೆನಿಯಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು ಕೊನೇ ದಿನ 30-09-2021




ಮಿನಿ ರತ್ನ ಎಂಬ ಹೆಗ್ಗಳಿಕೆಗೆ ಪಾತ್ರವಾದ ದೇಶದ ಸರ್ಕಾರಿ ಸ್ವಾಮ್ಯದ ಅಗ್ರಗಣ್ಯ ಜಲವಿದ್ಯುತ್ ನಿಗಮ ಎನ್‌ಎಚ್‌ಪಿಸಿ ಲಿ.ನಲ್ಲಿ ಉದ್ಯೋಗಾವಕಾಶ ತೆರೆದುಕೊಂಡಿದೆ.


ಅರ್ಹ ಅಭ್ಯರ್ಥಿಗಳು ಸೆಪ್ಟಂಬರ್ 29, 2021ರೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.


ಹುದ್ದೆಯ ವಿವರ:

1- ಹಿರಿಯ ವೈದ್ಯಾಧಿಕಾರಿ

ಒಟ್ಟು ಹುದ್ದೆ 13

ವಯೋಮಿತಿ- ಗರಿಷ್ಠ 33 ವರ್ಷ

ಮಾಸಿಕ ವೇತನ- 60000/- - 180000/-

ವಿದ್ಯಾರ್ಹತೆ: ಎಂಬಿಬಿಎಸ್ ಮತ್ತು ಎರಡು ವರ್ಷಗಳ ಇಂಟರ್ನ್ ಶಿಪ್


2- ಸಹಾಯಕ ರಾಜಭಾಷಾ ಅಧಿಕಾರಿ

ಒಟ್ಟು ಹುದ್ದೆ 7

ವಯೋಮಿತಿ- ಗರಿಷ್ಠ 35 ವರ್ಷ

ಮಾಸಿಕ ವೇತನ- 40000/- - 140000/-

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಿಂದ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ


3- ಜ್ಯೂನಿಯರ್ ಎಂಜಿನಿಯರ್ (ಸಿವಿಲ್)

ಒಟ್ಟು ಹುದ್ದೆ 68

ವಯೋಮಿತಿ- ಗರಿಷ್ಠ 30 ವರ್ಷ

ಮಾಸಿಕ ವೇತನ- 29600/- - 119500/-

ವಿದ್ಯಾರ್ಹತೆ: ಮಾನ್ಯತೆ ಪಡೆದ ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಕನಿಷ್ಟ ಶೇ. 60 ಅಂಕಗಳೊಂದಿಗೆ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ, ಆಟೋ ಕ್ಯಾಡ್ ಬಲ್ಲವರಿದ್ದರೆ ಉತ್ತಮ


4- ಜ್ಯೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್)

ಒಟ್ಟು ಹುದ್ದೆ 34

ವಯೋಮಿತಿ- ಗರಿಷ್ಠ 30 ವರ್ಷ

ಮಾಸಿಕ ವೇತನ- 29600/- - 119500/-

ವಿದ್ಯಾರ್ಹತೆ: ಮಾನ್ಯತೆ ಪಡೆದ ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಕನಿಷ್ಟ ಶೇ. 60 ಅಂಕಗಳೊಂದಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ, ಆಟೋ ಕ್ಯಾಡ್ ಬಲ್ಲವರಿದ್ದರೆ ಉತ್ತಮ


5- ಜ್ಯೂನಿಯರ್ ಎಂಜಿನಿಯರ್ (ಮೆಕ್ಯಾನಿಕಲ್)

ಒಟ್ಟು ಹುದ್ದೆ 31

ವಯೋಮಿತಿ- ಗರಿಷ್ಠ 30 ವರ್ಷ

ಮಾಸಿಕ ವೇತನ- 29600/- - 119500/-

ವಿದ್ಯಾರ್ಹತೆ: ಮಾನ್ಯತೆ ಪಡೆದ ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಕನಿಷ್ಟ ಶೇ. 60 ಅಂಕಗಳೊಂದಿಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ, ಆಟೋ ಕ್ಯಾಡ್ ಬಲ್ಲವರಿದ್ದರೆ ಉತ್ತಮ


6- ಹಿರಿಯ ಲೆಕ್ಕಾಧಿಕಾರಿ

ಒಟ್ಟು ಹುದ್ದೆ 20

ವಯೋಮಿತಿ- ಗರಿಷ್ಠ 30 ವರ್ಷ

ಮಾಸಿಕ ವೇತನ- 29600/- - 119500/-

ವಿದ್ಯಾರ್ಹತೆ: ಇಂಟರ್ ಮೀಡಿಯೇಟ್ ಸಿಎ ಅಥವಾ ಸಿಎಂಎ


ಅರ್ಜಿಗಳು ರೂ. 250/- ಅರ್ಜಿ ಶುಲ್ಕದೊಂದಿಗೆ ಆನ್ ಲೈನ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.


Helpdesk Mail: nhpchelpdesk2021@gmail.com

Helpdesk Number: 022-61087564


ಹೆಚ್ಚಿನ ವಿವರಗಳಿಗೆ www.nhpcindia.com ಭೇಟಿ ನೀಡಿ ಅಲ್ಲಿ Career ಸೆಕ್ಷನ್‌ನಲ್ಲಿ ಆನ್‌ಲೈನ್‌ನಲ್ಲಿ ಸಲ್ಲಿಸಬೇಕಾಗಿರುವ ಅರ್ಜಿ ಲಭ್ಯವಿರುತ್ತದೆ. ಅರ್ಹ ಅಭ್ಯರ್ಥಿಗಳು ತಮ್ಮ ಅಧಿಕೃತ ಇಮೇಲ್ ಐಡಿ ಮತ್ತು ಫೋನ್ ನಂಬರ್ ನಮೂದಿಸಿ ಅರ್ಜಿ ಹಾಕಬೇಕು.



ಅರ್ಜಿ ಸಲ್ಲಿಸುವ ಮೂಲಕ ತಮ್ಮ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧಪಡಿಸಿಟ್ಟುಕೊಳ್ಳಿ. ಇತ್ತೀಚಿನ ಭಾವಚಿತ್ರ ಹಾಗೂ ಸಹಿ(ಮಾಹಿತಿ ನೀಡಲಾಗಿದೆ) ಜೊತೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ಬಳಿಕ ಈ ದಾಖಲೆಯಲ್ಲಿ ಪ್ರಿಂಟ್ ಮಾಡಿಟ್ಟುಕೊಳ್ಳಿ.



ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ ಎದುರಿಸಬೇಕಾಗುತ್ತದೆ. ಈ ಪರೀಕ್ಷೆಯ ಮೆರಿಟ್ ಮೇಲೆ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ನೀಡಲಾಗುತ್ತದೆ.

ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ, ಅಹ್ಮದಾಬಾದ್, ಕೊಚ್ಚಿ, ಕೊಲ್ಕೊತ್ತಾ, ಲಕ್ನೋ, ಮುಂಬೈ ಸಹಿತ ದೇಶದ ಪ್ರಮುಖ 22 ಕೇಂದ್ರಗಳು