ಹೆತ್ತವರಿಂದಲೇ ರಕ್ಷಿಸಿ ಎಂದು ಸಹಾಯವಾಣಿಗೆ ಕರೆ ಮಾಡಿದ ಅಪ್ರಾಪ್ತ ಬಾಲಕಿ

ಬೆಂಗಳೂರು: ಆಪತ್ತು ಒದಗಿದಾಗ ರಕ್ಷಿಸಲು ಹೆತ್ತವರನ್ನು  ಕರೆಯುವುದು ಸಹಜ. ಆದರೆ ಇಲ್ಲೊಬ್ಬ ಯುವತಿ ಹೆತ್ತವರಿಂದಲೇ ರಕ್ಷಿಸಿ ಎಂದು ಸಹಾಯವಾಣಿಯ ಮೊರೆ ಹೋಗಿ ಸಹಾಯ ಕೋರಿದ್ದಾಳೆ. 

ಬೆಂಗಳೂರು ನಗರದ ಕೆರೆಗುಡ್ಡದಹಳ್ಳಿ ಗ್ರಾಮದ ನಿವಾಸಿ 17 ವರ್ಷದ ಬಾಲಕಿ ಸಹಾಯವಾಣಿಗೆ ಕರೆ ಮಾಡಿದಾಕೆ.  ಈಕೆ ಸಹಾಯವಾಣಿಗೆ ಕರೆ ಮಾಡಿ ತನ್ನ ತಾಯಿ-ತಂದೆಯ ವಿರುದ್ಧವೇ ದೂರಿತ್ತು ತನ್ನನ್ನು ರಕ್ಷಿಸಬೇಕೆಂದು ಕೋರಿಕೊಂಡಿದ್ದಾಳೆ. 

ತನಗೆ ತನ್ನ ತಾಯಿ-ತಂದೆಯೇ ಕಿರುಕುಳ ನೀಡುತ್ತಿದ್ದಾರೆ ಎಂದು ಬಾಲಕಿ ದೂರು ನೀಡಿರುವ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ಜಂಟಿ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಸದ್ಯ ಬಾಲಕಿಯನ್ನು ನಗರದ ಬಾಲಮಂದಿರದಲ್ಲಿ ಇರಿಸಲಾಗಿದೆ. 

ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.