-->

ತಾಯಿಯ ಅನೈತಿಕ ಸಂಬಂಧದ ವ್ಯಕ್ತಿಗೆ ಬ್ಲ್ಯಾಕ್ ಮೇಲ್: ಪ್ರಿಯಕರನೊಂದಿಗೆ ಸೇರಿ ಭರ್ಜರಿ ಮೊತ್ತವನ್ನು ಲಪಟಾಯಿಸಿದ ಖತರ್ನಾಕ್ ಪುತ್ರಿ

ತಾಯಿಯ ಅನೈತಿಕ ಸಂಬಂಧದ ವ್ಯಕ್ತಿಗೆ ಬ್ಲ್ಯಾಕ್ ಮೇಲ್: ಪ್ರಿಯಕರನೊಂದಿಗೆ ಸೇರಿ ಭರ್ಜರಿ ಮೊತ್ತವನ್ನು ಲಪಟಾಯಿಸಿದ ಖತರ್ನಾಕ್ ಪುತ್ರಿ

ಪುಣೆ: ತಾಯಿಯ ಅನೈತಿಕ ಸಂಬಂಧದ ಬಗ್ಗೆ ತಿಳಿಕೊಂಡ 21 ವರ್ಷದ ಪುತ್ರಿ ಇದನ್ನು ದೊಡ್ಡದು ಮಾಡಲು ಹೋಗಿಲ್ಲ. ಆದರೆ ತನ್ನ ಪ್ರಿಯಕರನೊಂದಿಗೆ ಸೇರಿ ತಾಯಿಯೊಂದಿಗೆ ಸಂಬಂಧವಿರಿಸಿದ್ದ ವ್ಯಕ್ತಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ಲಪಟಾಯಿಸಿದ್ದಾಳೆ. ಆದರೆ ಕೊನೆಗೆ ಇವರ ಹಣದ ದಾಹ ತೀರದಿರುವುದನ್ನು ಕಂಡು ಆತ ಠಾಣೆಯ ಮೆಟ್ಟಿಲೇರಿದ್ದಾನೆ.‌ ಆಗ ಖತರ್ನಾಕ್ ಪುತ್ರಿಯ ಬಂಡವಾಳ ಬಯಲಾಗಿದೆ. 

ಇಂತಹದೊಂದು ವಿಚಿತ್ರ ಪ್ರಕರಣ ಪುಣೆಯಲ್ಲಿ‌ ನಡೆದಿದೆ. 21 ವರ್ಷದ ಪುತ್ರಿಗೆ ತನ್ನ ತಾಯಿಗೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿರುವ ಬಗ್ಗೆ ಅನುಮಾನ ಬಂದಿದೆ. ಹಾಗಾಗಿ ಆಕೆ ಮೊದಲು ತನ್ನ ತಾಯಿಯ ವಾಟ್ಸ್ಆ್ಯಪ್ ಅನ್ನು ಹ್ಯಾಕ್ ಮಾಡಿದ್ದಾಳೆ. ಆಗ ತಾಯಿ ಮತ್ತು ವ್ಯಕ್ತಿಯ ನಡುವೆ  ರವಾನೆಯಾಗುತ್ತಿದ್ದ ಸಂದೇಶಗಳು, ನಗ್ನ ವೀಡಿಯೊ ಮತ್ತು ಅಶ್ಲೀಲ ಚಾಟ್ ಗಳು ಆಕೆಯ ಅನುಮಾನವನ್ನು ಗಟ್ಟಿಗೊಳಿಸಿದೆ. ಇದನ್ನು ದುರ್ಬಳಕೆ ಮಾಡಿಕೊಂಡ ಪುತ್ರಿ ತನ್ನ ಪ್ರಿಯಕರನೊಂದಿಗೆ ಸೇರಿ ತಾಯಿಯ ಪ್ರಿಯಕರನಿಗೆ ಬ್ಲ್ಯಾಕ್ ಮೇಲ್ ಮಾಡಿ 15ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. 

ತನ್ನ ಪ್ರಿಯಕರನ ಕಾರ್ಯಾಚರಣೆ ನಡೆಸಿ, ವ್ಯಕ್ತಿಗೆ ಬ್ಲ್ಯಾಕ್ ಮಾಡಿ ತಕ್ಷಣ 15 ಲಕ್ಷ ರೂ. ನೀಡಬೇಕು. ಬಳಿಕ ತಿಂಗಳಿಗೆ 1 ಲಕ್ಷ ರೂ. ನೀಡಬೇಕೆಂದು ಮಾತುಕತೆ ಮಾಡಿಸಿದ್ದಾಳೆ. ಕೇಳಿದಷ್ಟು ಹಣ ನೀಡದಿದ್ದಲ್ಲಿ ನಿಮ್ಮಿಬ್ಬರ ಏಕಾಂತದ ವೀಡಿಯೋ ಮತ್ತು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಎಂದು ಭಯ ಹುಟ್ಟಿಸಲು ಹೇಳಿದ್ದಾಳೆ.

ಮೊದಲಿಗೆ ಬೆದರಿದ ತಾಯಿಯ ಪ್ರಿಯಕರ ತನ್ನ ಕಾರು, ಬೈಕ್ ಗಳ ಮೇಲೆ ಸಾಲ ತೆಗೆದು ಹಣ ತಂದುಕೊಟ್ಟಿದ್ದಾನೆ. ಆದರೆ ಇವರ ಬೇಡಿಕೆ ಮುಗಿಯಲೇ ಇರದಿರುವುದನ್ನು ಕಂಡು ಆತ ಅನಿವಾರ್ಯವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಆಗ ಹಣ ಪಡೆಯಲು ಬಂದ ಪುತ್ರಿಯ ಪ್ರಿಯಕರ ಮಿಥುನ್ ಗಾಯಕ್ವಾಡ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನನ್ನು ಪೊಲೀಸರು ವಿಚಾರಣೆ ಮಾಡಿದಾಗ ಪುತ್ರಿಯೇ ಇದರ ಹಿಂದಿನ ಸೂತ್ರಧಾರಿಣಿ ಎಂಬ ಭಯಾನಕ ವಿಚಾರ ತಿಳಿದು ಬಂದಿದೆ.  ಇದೀಗ ಪುತ್ರಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article