-->

Chamara Foundation - ಚಾಮರ ಫೌಂಡೇಶನ್‌ನಿಂದ ಚೇಳಾಯ್ರು ಹೈಸ್ಕೂಲ್ ಮತ್ತು ಪಿ.ಯು ಕಾಲೇಜ್‌ಗೆ ಮಾಸ್ಕ್‌, ಥರ್ಮಾಮೀಟರು ಕೊಡುಗೆ

Chamara Foundation - ಚಾಮರ ಫೌಂಡೇಶನ್‌ನಿಂದ ಚೇಳಾಯ್ರು ಹೈಸ್ಕೂಲ್ ಮತ್ತು ಪಿ.ಯು ಕಾಲೇಜ್‌ಗೆ ಮಾಸ್ಕ್‌, ಥರ್ಮಾಮೀಟರು ಕೊಡುಗೆ



ಮಂಗಳೂರಿನ ಚೇಳಾಯ್ರು ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಹೈಸ್ಕೂಲ್‌ಗೆ ಎನ್ 95 ಮಾಸ್ಕ್‌ ಮತ್ತು ಥರ್ಮಾಮೀಟರ್‌ಗಳನ್ನು ಮಂಗಳೂರಿನ ಚಾಮರ ಫೌಂಡೇಶನ್ ಕೊಡುಗೆಯಾಗಿ ನೀಡಿದೆ. ವಿದ್ಯಾರ್ಥಿಗಳನ್ನು ಕೋವಿಡ್ ಸೋಂಕಿನಿಂದ ರಕ್ಷಿಸುವ ನಿಟ್ಟಿನಲ್ಲಿ ಈ ಕೊಡುಗೆ ಸಹಕಾರಿಯಾಗಲಿದೆ ಎಂದು ಚಾಮರ ಫೌಂಡೇಶನ್‌ನ ಆಡಳಿತ ಟ್ರಸ್ಟಿ ರಚನಾ ಹೇಳಿದರು.


ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮತ್ತು ಸರ್ಕಾರದ ನಿರ್ಬಂಧದ ಕಾರಣ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿದ ಪರಿಣಾಮ 320 ದಶಲಕ್ಷ ವಿದ್ಯಾರ್ಥಿಗಳು ಶಾಲೆ-ಕಾಲೇಜಿನಿಂದ ದೂರ ಉಳಿದಿದ್ದಾರೆ. ಎರಡನೇ ಅಲೆಯ ಪರಿಣಾಮ ಕಡಿಮೆಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮಕ್ಕಳನ್ನು ಸ್ವಾಗತಿಸಲು ಶಿಕ್ಷಣ ಸಂಸ್ಥೆಗಳು ಸಜ್ಜಾಗುತ್ತಿವೆ. ಈ ಹಂತದಲ್ಲಿ ಮಕ್ಕಳ ಉಪಯೋಗಕ್ಕೆ ಎನ್ 95 ಸರ್ಜಿಕಲ್ ಮಾಸ್ಕ್ ಮತ್ತು ಥರ್ಮಾಮೀಟರ್ ಸಹಕಾರಿಯಾಗಲಿದೆ ಎಂದು ಚಾಮರ ಫೌಂಡೇಶನ್‌ನ ಆಡಳಿತ ಟ್ರಸ್ಟಿ ರಚನಾ ಅಭಿಪ್ರಾಯಪಟ್ಟರು.


ಈ ಕೊಡುಗೆ ನೀಡಿದ ಸಂತೋಷ್ ಶ್ರೀನಿವಾಸ್ ಅವರನ್ನು ಈ ಸಂದರ್ಭದಲ್ಲಿ ಅವರು ಅಭಿನಂದಿಸಿದರು.





ಚೇಳಾಯ್ರು ಹೈಸ್ಕೂಲ್‌ ಮುಖ್ಯ ಶಿಕ್ಷಕಿ ಥೆರೆಸಾ ವೇಗಸ್, ಮಕ್ಕಳು ತಮ್ಮ ಕಲಿಕೆಯ ತಮ್ಮ ಎರಡನೇ ಮನೆಗೆ ಮರಳಲು ಉತ್ಸುಕರಾಗಿದ್ದಾರೆ. ಇಲ್ಲಿ ಅವರು ಕಲಿಕೆಯ ದೃಢತೆ ಮತ್ತು ಫಲಿತಾಂಶವನ್ನು ಕಂಡುಕೊಳ್ಳುತ್ತಾರೆ. ಅವರು ಸುರಕ್ಷಿತ ವಾತಾವರಣದಲ್ಲಿ ಶಾಲೆಯಲ್ಲಿ ಇರುವುದು ಮತ್ತು ಮನೆಗೆ ಆರೋಗ್ಯಕರವಾಗಿ ಮರಳುವುದನ್ನು ಕಾಪಾಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.


ಚಾಮರ ಫೌಂಡೇಶನ್ ಟ್ರಸ್ಟಿ ಮನೀಶ್ ಕೆ ಸಾಲಿಯಾನ್, ಚಾರುಶಿ ಮನೀಶ್, ಚೇಳಾಯ್ರು ಹೈಸ್ಕೂಲ್ ಶಿಕ್ಷಕರಾದ ಪ್ರೇಮ್‌ನಾಥ್ ಮರ್ಣೆ, ಟ್ರೂಸ್ಕಿಲ್ಸ್ ಪಾಲುದಾರ ನಿಹಾಲ್ ಸಿಕ್ವೇರಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಯರಾಮ ಆಚಾರ್ಯ ಮತ್ತು ಎಲ್ಲ ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.

Ads on article

Advertise in articles 1

advertising articles 2

Advertise under the article