-->
ಭಾರತ ಬಂದ್ ಪ್ರತಿಭಟನೆ ವೇಳೆ ಡಿಸಿಪಿ ಕಾಲಿನ ಮೇಲೆ ಕಾರು ಹತ್ತಿಸಿದ ಚಾಲಕ

ಭಾರತ ಬಂದ್ ಪ್ರತಿಭಟನೆ ವೇಳೆ ಡಿಸಿಪಿ ಕಾಲಿನ ಮೇಲೆ ಕಾರು ಹತ್ತಿಸಿದ ಚಾಲಕ

  

ಬೆಂಗಳೂರು: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ  ಇಂದು ಕರೆ ನೀಡಲಾಗಿದ್ದ ಬಂದ್ ಪ್ರಯುಕ್ತ ರೈತಪರ ಸಂಘಟನೆಗಳಿಂದ  ನಡೆದ  ಪ್ರತಿಭಟನಾ ಮೆರವಣಿಗೆ ವೇಳೆ  ಡಿಸಿಪಿ ಅವರ ಕಾಲಿನ ಮೇಲೆ ಕಾರು ಹತ್ತಿಸಿದ ಘಟನೆ ನಡೆದಿದೆ.

 

ಇಂದು ಬಂದ್ ಕರೆಯ ಹಿನ್ನೆಲೆಯಲ್ಲಿ  ಬೆಂಗಳೂರು  ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ಮೆರವಣಿಗೆ ವೇಳೆ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದರು.  ಡಿಸಿಪಿ ಧರ್ಮೇಂದ್ರ  ಕುಮಾರ್ ಮೀನಾ ಅವರು  ಬಂದೋಬಸ್ತ್​ನಲ್ಲಿ ಇರುವಾಗ ಅವರ ಕಾಲಿನ ಮೇಲೆ ಕಾರು ಹರಿದಿದೆ. ಪ್ರತಿಭಟನೆ ವೇಲೆ ಬಂದು ಕಾರು ಇವರ ಕಾಲಿನ ಮೇಲೆ ಹರಿದಿದ್ದು ಇವರ ಕಾಲಿಗೆ ಗಾಯವಾಗಿದೆ.

ಗೋರಗುಂಟೆಪಾಳ್ಯ ಬಳಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯಶವಂತಪುರ ಸಂಚಾರಿ ಪೊಲೀಸರು ಚಾಲಕ ಹಾಗೂ ಕಾರನ್ನು ವಶಕ್ಕೆ  ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ

Ads on article

Advertise in articles 1

advertising articles 2

Advertise under the article