ಮಂಗಳೂರು: ನಗರದ ಪಣಂಬೂರು ಬೀಚ್ ಬಳಿ ಇಂದು ಬೆಳಗ್ಗೆ ನಡೆದ ಬೋಟ್ ದುರಂತದಲ್ಲಿ ಓರ್ವ ಮೀನುಗಾರ ನಾಪತ್ತೆಯಾಗಿ, ನಾಲ್ವರನ್ನು ರಕ್ಷಿಸಲಾಗಿದೆ.
ಮೀನುಗಾರ ಶರೀಫ್ ನಾಪತ್ತೆಯಾದವರು. ಅಬ್ದುಲ್ ಅಜೀಜ್, ಇಮ್ತಿಯಾಝ್, ಸಿನಾನ್, ಫಿರೋಝ್ ರಕ್ಷಣೆಯಾದವರು.
ನಗರದ ಪಣಂಬೂರು ಬೀಚ್ ಬಳಿ
ಇಂದು ಬೆಳಗ್ಗೆ 7.30 ಸುಮಾರಿಗೆ ಬೀಸಿದ ಬಿರುಗಾಳಿಗೆ ಗಿಲ್ ನೆಟ್ ಬೋಟ್ ಸಿಲುಕಿದೆ. ಇದರಿಂದ ಬೋಟ್ ಬುಡಮೇಲಾಗಿದೆ. ಈ ದುರಂತದಲ್ಲಿ ಓರ್ವ ಮೀನುಗಾರ ಸಮುದ್ರ ಪಾಲಾಗಿದ್ದಾನೆ. ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ನಾಪತ್ತೆಯಾದ ಮೀನುಗಾರ ಶರೀಫ್ ಅವರ ಪತ್ತೆಗೆ ಹುಡುಕಾಟ ನಡೆಯುತ್ತಿದೆ. ದುರಂತಕ್ಕೀಡಾದ ದೋಣಿಯನ್ನು ದಡಕ್ಕೆ ತರಲಾಗಿದೆ.