-->
ಕಾರು - ಅಟೊ ಮಧ್ಯೆ ಭೀಕರ ಅಪಘಾತ-  ಒಂದೇ ಕುಟುಂಬದ ಮೂವರ  ಸಹಿತ ನಾಲ್ವರ ಸಾವು

ಕಾರು - ಅಟೊ ಮಧ್ಯೆ ಭೀಕರ ಅಪಘಾತ- ಒಂದೇ ಕುಟುಂಬದ ಮೂವರ ಸಹಿತ ನಾಲ್ವರ ಸಾವು

 


ಮುಂಬಯಿ; ಕಾರು ಮತ್ತು ಆಟೋ ಮಧ್ಯೆ ಮುಖಾಮುಖಿ ಡಿಕ್ಕಿ ನಡೆದು ಒಂದೇ ಕುಟುಂಬದ ಮೂವರು ಸಹಿತ ನಾಲ್ವರು ಸಾವನ್ನಪ್ಪಿದ ಘಟನೆ ಮುಂಬಯಿ ಠಾಣೆಯ ಅಂಬರ್​ನಾಥ ತಾಲೂಕಿನ ಪಾಲೇಗಾಂವ್​ನ ರಸ್ತೆಯಲ್ಲಿ ನಡೆದಿದೆ.ಭೀಕರ ರಸ್ತೆ ಅಪಘಾತದಲ್ಲಿ ವರ್ಷ ವಾಲೆಚಾ (51), ಆರತಿ ವಾಲೆಚಾ (41), ರಾಜ್ ವಾಲೆಚಾ (12) ಮತ್ತು ರಿಕ್ಷಾ ಚಾಲಕ ವಿಠ್ಠಲ್​ ಶಿಂಧೆ  ಸಾವನ್ಬಪ್ಪಿದ್ದಾರೆ. ಅಟೋ ಗೆ ಎದುರುಬದಿಯಿಂದ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರ ಮೃತದೇಹವನ್ನು ಮುಂಬಯಿಯ ಉಲ್ಲಾಸ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದೆ.

Ads on article

Advertise in articles 1

advertising articles 2

Advertise under the article