-->

40 ವರ್ಷಗಳಿಂದ ಅರಣ್ಯದಲ್ಲಿಯೇ ಸ್ವಚ್ಛಂದವಾಗಿ ವಾಸಿಸುತ್ತಿದ್ದ ವಿಯಾಟ್ನಾಂನ ರಿಯಲ್​ ಟಾರ್ಜನ್​ ನಾಡಿಗೆ ಮರಳಿ 8 ವರ್ಷದಲ್ಲಿ ಕ್ಯಾನ್ಸರ್ ಗೆ ಬಲಿ!

40 ವರ್ಷಗಳಿಂದ ಅರಣ್ಯದಲ್ಲಿಯೇ ಸ್ವಚ್ಛಂದವಾಗಿ ವಾಸಿಸುತ್ತಿದ್ದ ವಿಯಾಟ್ನಾಂನ ರಿಯಲ್​ ಟಾರ್ಜನ್​ ನಾಡಿಗೆ ಮರಳಿ 8 ವರ್ಷದಲ್ಲಿ ಕ್ಯಾನ್ಸರ್ ಗೆ ಬಲಿ!

ವಿಯಾಟ್ನಾಂ: 40 ವರ್ಷಗಳಿಂದ  ಅರಣ್ಯದಲ್ಲಿಯೇ ವಾಸಿಸುತ್ತಿದ್ದ ವಿಯಾಟ್ನಾಂನ ರಿಯಲ್​ ಟಾರ್ಜನ್​ (ಕಾಡು ಮನುಷ್ಯ) ಹೋವಾ ವಾನ್‌ ಲಂಗ್‌ ನಾಡಿಗೆ ಕಾಲಿಟ್ಟ 8 ವರ್ಷಗಳಲ್ಲೇ ಕ್ಯಾನ್ಸರ್​ ರೋಗಕ್ಕೆ ತುತ್ತಾಗಿ, ಸೋಮವಾರ ಲಿವರ್​ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾನೆ. ಅರಣ್ಯದಲ್ಲಿ  ಸ್ವಚ್ಛಂದವಾಗಿ, ಆರೋಗ್ಯವಾಗಿ, ವಾಸಿಸುತ್ತಿದ್ದ ಈತ, ನಾಗರಿಕ ಜಗತ್ತಿಗೆ ಕಾಲಿಟ್ಟಿದ್ದೇ ಆತನ ಮೃತ್ಯುವಿಗೆ ಕಾರಣವಾಯಿತೇ ಎನ್ನುವ ಚರ್ಚೆ ಎಲ್ಲೆಡೆ ಆರಂಭವಾಗಿದ್ದು, ಈ ಬಗ್ಗೆ ಆಕ್ರೋಶಗಳು ವ್ಯಕ್ತವಾಗಿವೆ.

ಹೋವಾ ವಾನ್‌ ಲಂಗ್‌ (52) ಕಳೆದ 40 ವರ್ಷಗಳಿಂದ ಕಾಡಿನಲ್ಲಿಯೇ ಇದ್ದು, ಹೊರಗಿನ ಪ್ರಪಂಚದ ಅರಿವೇ ಆತನಿಗೆ ಇರಲಿಲ್ಲ. 1972ರಲ್ಲಿ ನಡೆದ ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಅಮೆರಿಕಾ ಬಾಂಬ್‌ ದಾಳಿ ನಡೆಸಿತ್ತು. ಈ ವೇಳೆ ಆತ ತನ್ನ ತಾಯಿ ಮತ್ತು ಒಡಹುಟ್ಟಿದವರನ್ನು ಕಳೆದುಕೊಂಡಿದ್ದ. ಅದರಲ್ಲಿ ಬದುಕಿ ಉಳಿದಿದ್ದು ಈತನ ತಂದೆ ಮತ್ತು ಓರ್ವ ಸಹೋದರ ಮಾತ್ರ. ಅವರು ಜೀವ ಉಳಿಸಿಕೊಳ್ಳಲು ಅರಣ್ಯಕ್ಕೆ ಇವರು ಓಡಿಹೋಗಿದ್ದರು. ಆಗ ಸಣ್ಣ ಮಗುವಾಗಿದ್ದ ಹೋವಾ 42 ವರ್ಷಗಳ ಕಾಲ ಕಾಂಗ್ ಗಾಯ್ ಪ್ರಾಂತ್ಯದ ಟೇ ಟ್ರಾ ಜಿಲ್ಲೆಯ ದಟ್ಟಡವಿಯಲ್ಲಿಯೇ ಬೆಳೆದಿದ್ದ. ಜೇನುತುಪ್ಪ, ಹಣ್ಣುಗಳು ಹಾಗೂ ಕಾಡುಪ್ರಾಣಿಗಳನ್ನು ತಿಂದುಕೊಂಡು ಅವರು ಬದುಕುತ್ತಿದ್ದರು. ಮರಮುಟ್ಟು ಬಳಸಿಕೊಂಡು ಮನೆಕಟ್ಟಿಕೊಂಡಿದ್ದರು.

ವನ್ಯಜೀವಿಗಳ ಛಾಯಾಚಿತ್ರಕ್ಕಾಗಿ ಕಾಡಿಗೆ ಹೋಗಿದ್ದ ಸಂದರ್ಭ ಛಾಯಾಗ್ರಾಹಕ ಅಲ್ವಾರೋ ಸೆರೆಜೋ ಕಣ್ಣಿಗೆ ಹೋವಾ ವಾನ್‌ ಲಂಗ್‌ ಬಿದ್ದಿದ್ದ. ಈತನನ್ನು 8 ವರ್ಷಗಳ ಹಿಂದೆ ಕಾಡಿನಿಂದ ನಾಡಿಗೆ ಕರೆತರಲಾಗಿತ್ತು. ಆ ಸಮಯದಲ್ಲಿ ಹೆಂಗಸರನ್ನು ಕಂಡು ಈತ ವಿಚಿತ್ರ ರೀತಿಯಲ್ಲಿ ನೋಡುತ್ತಿದ್ದ. ಹೋವಾನನ್ನು ಅಲ್ವಾರೋ ಮಾತನಾಡಿಸಿದಾಗ ಹೆಣ್ಣುಮಕ್ಕಳು ಭೂಮಿಯ ಮೇಲೆ ಇರೋದೇ ಗೊತ್ತಿಲ್ಲ ಎಂದಿದ್ದ.

ಈ ಕುರಿತು ಮಾಹಿತಿ ನೀಡಿರುವ ಅಲ್ವಾರೋ ಸೆರಜೊ, ಬೇರೆ ಜನರನ್ನು ಕಂಡೊಡನೆಯೇ ಈ ಕಾಡುಮಂದಿ ಓಡಿ ಹೋಗುತ್ತಿದ್ದರು. ಆದರೆ ಹೋವಾನನ್ನು ತಾನು ನಾಡಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇನೆ. ಈತನಿಗೆ ಗಂಡು ಹೆಣ್ಣಿನ ನಡುವಿನ ಅಂತರ ತಿಳಿದಿಲ್ಲ. ಆದ್ದರಿಂದ ಈತನಿಗೆ ಲೈಂಗಿಕ ಆಸಕ್ತಿಯೂ ಇಲ್ಲ, ಜೊತೆಗೆ ಮಕ್ಕಳು ಹುಟ್ಟಲು ಹೆಣ್ಣು ಬೇಕು, ಗಂಡು-ಹೆಣ್ಣಿನ ನಡುವೆ ಸಂಭೋಗ ನಡೆಯಬೇಕೆಂಬ ಆ ಅರಿವೂ ಈತನಿಗಿಲ್ಲ. ಸಂಭೋಗದ ಬಗ್ಗೆ ಕೇಳಿದಲ್ಲಿ ಈತನಿಗೆ ಏನೇನೂ ಗೊತ್ತಿಲ್ಲ. ಹಾಗೆಂದರೇನು ಎಂದು ಪ್ರಶ್ನಿಸಿದ್ದಾನೆ ಎಂದಿದ್ದಾರೆ. ಸದ್ಯ ಈತನನ್ನು ‘ರಿಯಲ್ ಟಾರ್ಜನ್’ ಎಂದು ಕರೆಯಲಾಗಿತ್ತು. ಕಾಡಿನ ಪ್ರಶಾಂತ ವಾತಾವರಣದಲ್ಲಿದ್ದ ಈತನಿಗೆ ನಾಡಿನ ದಾವಾಂತವನ್ನು ಅರಗಿಸಿಕೊಳ್ಳುವುದು ಕಷ್ಟವಾಗಿದೆ ಎಂದು ಹೇಳಿಕೊಂಡಿದ್ದ. 

2013ರಿಂದ ನಾಡಿನಲ್ಲಿ ವಾಸಿಸಲು ಆರಂಭಿಸಿರುವ ಬಳಿಕ ಹೋವಾಗೆ ಆಧುನಿಕ ಜೀವನಶೈಲಿಗೆ ಹೊಂದಿಕೊಳ್ಳುವುದು ಕಷ್ಟವಾಯಿತಂತೆ. ಈ ಆಧುನಿಕ ಜಗತ್ತಿನ ಒತ್ತಡಗಳು ಮತ್ತು ಕಳಪೆ ಗುಣಮಟ್ಟದ ಆಹಾರ ಹೋವಾ, ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಆತನ ಸ್ನೇಹಿತರು ನಂಬಿದ್ದಾರೆ.

ಹೋವಾ ಸ್ನೇಹಿತ ಅಲ್ವಾರೊ ಸೆರೆಜೊ ಹೇಳಿಕೆ ಪ್ರಕಾರ 'ಸಂಸ್ಕರಿಸಿದ ಆಹಾರ ಸೇವನೆ ಮಾಡಲು ಆರಂಭಿಸಿದ ಬಳಿಕ ಹಾಗೂ ಕೆಲವೊಮ್ಮೆ ಮದ್ಯಪಾನ ಮಾಡಲು ಆರಂಭಿಸಿದ ಬಳಿಕ ಬಹುಶಃ ‘ಆಧುನಿಕ’ ಜೀವನವು ಅವರಿಗೆ ಮಾರಕ ಪರಿಣಾಮಗಳನ್ನು ಉಂಟುಮಾಡಿರಬಹುದು. ಅಲ್ಲದೆ, ಹೋವಾ ಓರ್ವ ಸುಂದರ ಮನುಷ್ಯ, ಅವನನ್ನು ಮರೆಯುವುದು ಸಾಧ್ಯವೇ ಇಲ್ಲ. ಆತನನ್ನು ನಾನು ಪ್ರತಿದಿನವೂ ಮಿಸ್​ ಮಾಡಿಕೊಳ್ಳುತ್ತೇನೆ ಅಂದಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article