22 ವರ್ಷದ ಟಾಲಿವುಡ್ ಸಿನಿಮಾ‌ ನಟಿ ಆತ್ಮಹತ್ಯೆ- ಕಾರಣ ಪ್ರೇಮ ವೈಫಲ್ಯ?

22 ವರ್ಷದ ಸಿನಿಮಾ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣ ರಾಜ್ಯದ ಬಂಜಾರ​ ಹಿಲ್ಸ್​​​ನಲ್ಲಿ ಇಂದು ನಡೆದಿದೆ. 


ಟಾಲಿವುಡ್​ ನಟಿ ಅನುರಾಧಾ ಆತ್ಮಹತ್ಯೆ ಮಾಡಿಕೊಂಡವರು. ಇವರು ತೆಲುಗು ಸಿನಿಮಾಗಳಲ್ಲಿ ಜ್ಯೂನಿಯರ್​ ಕಲಾವಿದೆಯಾಗಿ ಆಗಿ ಕೆಲಸ ಮಾಡುತ್ತಿದ್ದರು.



 ಬಂಜಾರ​ಹಿಲ್ಸ್​​ನ ಫಿಲ್ಮ್ ನಗರದಲ್ಲಿ ಅನುರಾಧಾ ಅವರು ಕಿರಣ್​ ಎಂಬ ವ್ಯಕ್ತಿಯ ಜೊತೆ ವಾಸವಾಗಿದ್ದರು. ಇವರಿಬ್ಬರು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. 

 ಇತ್ತೀಚೆಗೆ ಈ ಜೋಡಿ  ಮದುವೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಕಳೆದ ಮೂರು ತಿಂಗಳಿಂದ ಇಬ್ಬರು ಒಟ್ಟಿಗೆ ಜೀವನ ನಡೆಸುತ್ತಿದ್ದರು. ಆದರೆ ಕಿರಣ್  ಕೆಲ ದಿನಗಳ ಹಿಂದೆ ಅನುರಾಧಾ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದ. 



ಇದರಿಂದಾಗಿ ಅನುರಾಧ ಮಾನಸಿಕ ಖಿನ್ನತೆಗೊಳಗಾಗಿದ್ದರು. ನಟಿ ಅನುರಾಧಾ ಮಂಗಳವಾರ ರಾತ್ರಿ ಮನೆಯ ಕೊಠಡಿಯ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿದ್ದಾರೆ. 


 ಆಕೆಯ ಕೋಣೆಯಿಂದ ದುರ್ವಾಸನೆ ಬರಲು ಆರಂಭವಾದ ಹಿನ್ನೆಲೆಯಲ್ಲಿ  ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಪರಿಶೀಲಿಸಿದಾಗ ಆತ್ಮಹತ್ಯೆ  ಬೆಳಕಿಗೆ ಬಂದಿದೆ.

ಈಕೆಯ ಪೋಷಕರನ್ನು ವಿಚಾರಿಸಿದಾಗ ಕಿರಣ್​ ಎಂಬ ವ್ಯಕ್ತಿಯನ್ನು ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಮತ್ತು ವಿವಾಹವಾಗುವುದಾಗಿ ನಂಬಿಸಿ, ಆಕೆಯನ್ನು ತನ್ನೊಟ್ಟಿಗೆ ಇರಿಸಿಕೊಂಡಿದ್ದ ಎಂದು ಮಾಹಿತಿ ನೀಡಿದ್ದಾರೆ.