ಟೊಯೊಟಾ ಸಂಸ್ಥೆಯಿಂದ ಮಿನಿ ಇಲೆಕ್ಟ್ರಿಕ್ ಸಿ+ಪಾಡ್ ಕಾರು ಬಿಡುಗಡೆ: ಸಂಪೂರ್ಣ ಚಾರ್ಜ್ ಗೆ 150 ಕಿ.ಮೀ.ವರೆಗೆ ಚಾಲನೆ

ನವದೆಹಲಿ: ಜಪಾನ್ ನ ಪ್ರಸಿದ್ಧ ಕಾರು ತಯಾರಕ ಸಂಸ್ಥೆ ಟೊಯೋಟಾ ಮೋಟಾರ್ ಕಾರ್ಪೊರೇಶನ್‌ ಇಬ್ಬರು ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾದ ಮಿನಿ ಇಲೆಕ್ಟ್ರಿಕ್ ಕಾರು ಸಿ+ಪಾಡ್ (C + POD) ಅನ್ನು ಪರಿಚಯಿಸಿದೆ. ಈ ಕಾರನ್ನು ಸ್ಪೆಷಲ್ ಎಡಿಷನ್ ನಡಿಯಲ್ಲಿ ಬಿಡುಗಡೆ ಮಾಡಿದೆ.

ಗಾತ್ರದಲ್ಲಿ ಬಹಳ ಸಣ್ಣದಾಗುರುವ ಈ ಕಾರಿನ ಒಟ್ಟು ತೂಕ ಕೇವಲ 690 ಕೆ.ಜಿ. ಮಾತ್ರ. ಇದರ ಉದ್ದ 2,490 ಮಿ.ಮೀ. ಇದ್ದು, ಅಗಲ 1,290 ಮಿ.ಮೀ. ಹಾಗೂ ಎತ್ತರ 1,550 ಮಿ.ಮೀ. ಇದೆ. ಕೇವಲ ಇಬ್ಬರು ಮಾತ್ರ ಕುಳಿತುಕೊಳ್ಳಲು ಸಾಧ್ಯವಾಗುವ ಆಸನದ ವ್ಯವಸ್ಥೆ ಇದರಲ್ಲಿದೆ. ಅದರೆ ಈ ಕಾರಿನ ಹಿಂಬದಿ​ಯಲ್ಲಿ ಲಗೇಜ್ ಸ್ಪೇಸ್ ನೀಡಲಾಗಿರುವುದು ವಿಶೇಷವಾಗಿದೆ.


C + POD ಕಾರು 9.06 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇದು ಗರಿಷ್ಠ 12 ಎಚ್ ಪಿ ಪವರ್ ಮತ್ತು 56 ಎನ್ ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಆದ್ದರಿಂದ ಈ ಕಾರನ್ನು 60 ಕಿಲೋಮೀಟರ್ ವೇಗದಲ್ಲಿ ಓಡಿಸಬಹುದು.

ಇದರ ಬ್ಯಾಟರಿ ಸಂಪೂರ್ಣ ಚಾರ್ಜ್​ ಆಗಲು 5 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ 100V/6A ಗುಣಮಟ್ಟದ ವಿದ್ಯುತ್ ಪೂರೈಕೆಯ ಸಹಾಯದಿಂದ ಸಂಪೂರ್ಣ ಚಾರ್ಜ್ ಆಗಲು 16 ಗಂಟೆ ತೆಗೆದುಕೊಳ್ಳುತ್ತದೆ. ಈ ಕಾರನ್ನು ಒಂದು ಬಾರಿ ಸಂಪೂರ್ಣ ಚಾರ್ಜ್​ ಮಾಡಿಕೊಂಡಲ್ಲಿ 150 ಕಿ.ಮೀ.ವರೆಗೆ ಚಲಿಸಬಹುದು. ಆದ್ದರಿಂದ ದೂರದ ಪ್ರಯಾಣಗಳಿಗೂ ಈ ಕಾರನ್ನು ಆರಾಮವಾಗಿ ಬಳಸಿಕೊಳ್ಳಬಹುದು.


ಸದ್ಯ C + POD ಕಾರಲ್ಲಿ‌ ಎಕ್ಸ್ ವೇರಿಯಂಟ್ ಹಾಗೂ ಜಿ ವೇರಿಯಂಟ್ ಎಂಬ ಎರಡು ಮಾಡೆಲ್​ಗಳು ಬಿಡುಗಡೆ ಆಗಿದೆ.  ಎಕ್ಸ್ ವೇರಿಯಂಟ್ ನ ಬೆಲೆ 1.65 ಮಿಲಿಯನ್ ಯೆನ ( ಭಾರತೀಯ ಕರೆನ್ಸಿಯ ಮೌಲ್ಯ 11.75 ಲಕ್ಷ ರೂ.) ಆಗಿದೆ. ಅದೇ ರೀತಿ ಜಿವೇರಿಯಂಟ್ ಬೆಲೆ 1.71 ಮಿಲಿಯನ್ ಯೆನ್ (ಭಾರತೀಯ ಮೌಲ್ಯ 12.15 ಲಕ್ಷ ರೂ.) ಆಗಿದೆ.
BREAKING NEWS
Loading latest news...
Join our WhatsApp Channel Powered By : Online Pudu