15 ರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ- ಸಿಗರೇಟ್ ನಿಂದ ಎದೆಭಾಗಕ್ಕೆ ಸುಟ್ಟ ಕಿರಾತಕರು

 



ಮಧ್ಯಪ್ರದೇಶ  : 15  ಹರೆಯದ ಅಪ್ರಾಪ್ತ  ಬಾಲಕಿ ಮೇಲೆ  ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಸಿಧಿಯಲ್ಲಿ ನಡೆದಿದೆ.

 

ಸಾಮೂಹಿಕ ಅತ್ಯಾಚಾರ ಮಾಡಿದ  ನಾಲ್ವರು ಕಾಮುಕರು ಬಾಲಕಿಯ  ಎದೆ ಭಾಗಕ್ಕೆ ಸಿಗರೇಟ್​ನಿಂದ ಸುಟ್ಟು, ಬಳಿಕ ಆಕೆಯನ್ನು ಕೊಲೆ ಮಾಡಿದ್ದಾರೆ.  ಇದು ಮಧ್ಯಪ್ರದೇಶದ  ಸಿಧಿಯ ಬಹನಿ ಚೌಕಿ ಎಂಬ ಗ್ರಾಮದಲ್ಲಿ ನಡೆದಿದೆ.

 

 ಕಿರಿಯ ಸಹೋದರನನ್ನ ಶಾಲೆಗೆ ಕರೆದುಕೊಂಡು ಹೋಗಿದ್ದ ಬಾಲಕಿ ಮನೆಗೆ ಹಿಂತಿರುಗದ ಕಾರಣ, ಆಕೆಯ ಮನೆಯವರು ಹುಡುಕಾಟ ನಡೆಸಿದಾಗ ಹತ್ತಿರದ ಕಾಡಿನಲ್ಲಿ ಆಕೆಯ ಮೃತದೇಹ ಸಿಕ್ಕಿದೆ. ಆಕೆಯ ಮೃತದೇಹ  ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

 

ನಾಲ್ಕು ಮಂದಿ  ಆರೋಪಿಗಳು ಅಪ್ರಾಪ್ತ  ಬಾಲಕಿ ಮೇಲೆ ಅತ್ಯಾಚಾರವೆಸಗಿ ಆಕೆಯ ಎದೆಯ ಭಾಗಕ್ಕೆ ಸಿಗರೇಟ್​ನಿಂದ ಸುಟ್ಟು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ.

 

 ಇದಾದ ಬಳಿಕ ಮೃತದೇಹವನ್ನು  ಮರಕ್ಕೆ ನೇತು ಹಾಕಿ ಪರಾರಿಯಾಗಿದ್ದಾರೆ. ಬಾಲಕಿ  ಮೇಲೆ ಅತ್ಯಾಚಾರವೆಸಗಿ ಕಾಮುಕರು ಆಕೆಯನ್ನು ಹತ್ಯೆಗೈದಿದ್ದಾರೆ

 

ತನ್ನ ಕಿರಿಯ ಸಹೋದರನನ್ನ ಶಾಲೆಗೆ ಬಿಡಲು ಬೆಳಗ್ಗೆ ತೆರಳಿದ್ದ ಬಾಲಕಿ  ಶಾಲೆಯಿಂದ ವಾಪಸ್​ ಹಿಂದಿರುಗುತ್ತಿದ್ದ ವೇಳೆ  ನಾಲ್ವರು ಆಕೆಗೆ ಕಿರುಕುಳ  ನೀಡಿ ಬಲವಂತವಾಗಿ ಬಾಲಕಿಯನ್ನ ಬೈಕ್​​ನಲ್ಲಿ ಕರೆದುಕೊಂಡು ಕಾಡಿಗೆ ತೆರಳಿ ಅತ್ಯಾಚಾರವೆಸಗಿದ್ದಾರೆ.

ಇದಾದ ಬಳಿಕ ಮೃತದೇಹವನ್ನ ಮರಕ್ಕೆ ನೇತು ಹಾಕಿದ್ದಾರೆ. ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.