-->
ಆರು ವರ್ಷದ ಬಾಲಕಿಯ ಅತ್ಯಾಚಾರ ನಡೆಸಿ ಕೊಲೆ: ಆರೋಪಿಯ ಹುಡುಕಿ ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಹೈದರಾಬಾದ್ ಪೊಲೀಸರು

ಆರು ವರ್ಷದ ಬಾಲಕಿಯ ಅತ್ಯಾಚಾರ ನಡೆಸಿ ಕೊಲೆ: ಆರೋಪಿಯ ಹುಡುಕಿ ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಹೈದರಾಬಾದ್ ಪೊಲೀಸರು

ಹೈದರಾಬಾದ್​: ಆರು ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದು ಪರಾರಿಯಾದ ರಾಕ್ಷಸನ ಬಂಧನಕ್ಕೆ ಎಲ್ಲೆಡೆಯಿಂದ ಆಕ್ರೋಶ ಕೇಳಿ ಬರುತ್ತಿದೆ.

ಸೆಪ್ಟೆಂಬರ್​ 9ರಂದು ಬಾಲಕಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಮೃತದೇಹ ಬೆಡ್​ಶೀಟ್​ನಲ್ಲಿ ಸುತ್ತಿಕೊಂಡಿರುವ ಸ್ಥಿತಿಯಲ್ಲಿ ನೆರೆಯ ಮನೆಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಅತ್ಯಾಚಾರ ಆರೋಪವು ಪಲ್ಲಕೊಂಡ ರಾಜು (30) ಎಂಬಾತ ಮೇಲೆ ಬಂದಿದೆ. ಆತ ಬಾಲಕಿಯ ಪಕ್ಕದ ಮನೆಯ ನಿವಾಸಿಯಾಗಿದ್ದು, ಬಾಲಕಿ ಅತ್ಯಾಚಾರಗೊಂಡು ಮೃತದೇಹ ಪತ್ತೆಯಾದ ಬಳಿಕ ಕಣ್ಮರೆಯಾಗಿದ್ದ. 

ಕಳೆದ ವಾರ ಹೈದರಾಬಾದ್ ನಗರದ ಸೈಬರಾಬಾದ್​ ಸಿಂಗ್ರೌನಿ ಕಾಲನಿಯಲ್ಲಿ ಪಕ್ಕದ ಮನೆಯ ಆರು ವರ್ಷದ ಬಾಲಕಿಯನ್ನು ಈ ಕಾಮುಕ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ಪರಾರಿಯಾಗಿದ್ದು ಈವರೆಗೂ ಆತ ಪತ್ತೆಯಾಗಿಲ್ಲ. ಆರೋಪಿಯು ಅರೆಸ್ಟ್ ಆದ ತಕ್ಷ ಎನ್​ಕೌಂಟರ್​ ಮಾಡುವಂತೆ ತೆಲಂಗಾಣ ಕಾರ್ಮಿಕ ಸಚಿವ ಮಲ್ಲ ರೆಡ್ಡಿ ಒತ್ತಾಯಿಸಿದ್ದಾರೆ. 

ಈ ನಡುವೆ ಆರೋಪಿಯ ಸುಳಿವು ನೀಡಿದವರಿಗೆ ಸೈಬರಾಬಾದ್​ ಪೊಲೀಸರು 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ. ಅಲ್ಲದೆ, ಆತನ ಫೋಟೋ ಬಿಡುಗಡೆ ಮಾಡಿದ್ದು, ಆರೋಪಿಯ ಪತ್ತೆಯಾದಲ್ಲಿ 9490616366, 9490616627 ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಹೈದರಾಬಾದ್​ ಪೊಲೀಸರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಮೊದಲಿಗೆ ಆರೋಪಿಯನ್ನು ಬಂಧಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ, ಬಳಿಕ ಆರೋಪಿ ಇನ್ನೂ ಪತ್ತೆಯಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ನಡುವೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಾಲಕಿಗೆ ನ್ಯಾಯ ಒದಗಿಸಿಕೊಡುವಂತೆ ಪ್ರತಿಭಟನೆ ನಡೆಯುತ್ತಿದೆ. 

ಘಟನೆ ಕುರಿತು ತೆಲಂಗಾಣ ಸಚಿವ ಕೆ.ಟಿ. ರಾಮರಾವ್​ ಪ್ರತಿಕ್ರಿಯೆ ನೀಡಿ,  ಸರಿಯಾದ ಮಾಹಿತಿ ಇಲ್ಲದೆ ಆರಂಭದಲ್ಲಿ ತಾನು ಆರೋಪಿಯ ಅರೆಸ್ಟ್ ಆಗಿದ್ದಾನೆಂದು ಟ್ವೀಟ್​ ಮಾಡಿದ್ದೆ. ನನ್ನ ತಪ್ಪು ಹೇಳಿಕೆಗೆ ವಿಷಾದಿಸುತ್ತೇನೆ. ಆರೋಪಿ ತಲೆಮರೆಸಿಕೊಂಡಿದ್ದು, ಹೈದರಾಬಾದ್​ ಪೊಲೀಸರು ಆತನ ಹಿಂದೆ ಬಿದ್ದಿದ್ದಾರೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು ಮತ್ತು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎಂದಿದ್ದಾರೆ. ಅನೇಕ ರಾಜಕಾರಣಿಗಳು, ಕಾರ್ಯಕರ್ತರು ಮತ್ತು ಸಿನಿಮಾ ಕಲಾವಿದರು ಈ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article