ಹಾಸನದಲ್ಲಿ ಕಳೆದ ರಾತ್ರಿ ಅಕ್ರಮವಾಗಿ ಪಿಕಪ್ ಒಂದರಲ್ಲಿ 50 ಕರುಗಳನ್ನು ಕೈಕಾಲುಗಳನ್ನು ಕಟ್ಟಿ ಅಮಾನುಷವಾಗಿ ಹತ್ಯೆ ಮಾಡಲು ಸಾಗಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಗಾಡಿ ಮಗುಚಿ ಬಿದ್ದ ಕಾರಣ 30 ಕ್ಕೂ ಹೆಚ್ಚು ಕರುಗಳು ಸಾವನ್ನಪ್ಪಿದೆ.
ಈ ಘಟನೆಯಿಂದ ಇಡೀ ಹಿಂದೂ ಸಮಾಜದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ರಮ ಗೋ ಸಾಗಾಟ ಮಾಡಿ 30 ಕರುಗಳು ಸಾವನ್ನಪ್ಪಲು ಕಾರಣವಾದ ವಾಹನ ಮಾಲೀಕರ ಬಂಧನವಾಗಬೇಕು, ಗೋ ಸಾಗಾಟ ಕಾಯಿದೆಯಡಿ ಕಠಿಣ 10 ವರ್ಷ ಶಿಕ್ಷೆ ನೀಡಬೇಕು ಮತ್ತು ವಾಹನವನ್ನು ಮುಟ್ಟುಗೋಲು ಹಾಕಬೇಕು ಎಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರದೀಪ್ ಪಂಪು ವೆಲ್ ತಿಳಿಸಿದ್ದಾರೆ.


