SSLC Topper | ಸುಬ್ರಹ್ಮಣ್ಯ- ಎಸ್ ಎಸ್ ಎಲ್ ಸಿ ಸಾಧಕರಿವರು: 625/625





ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ರಲ್ಲಿ 625 ಅಂಕ ಗಳಿಸುವ ಮೂಲಕ ದಕ್ಷಿಣ ಕನ್ನಡದ ಇಬ್ಬರು ವಿದ್ಯಾರ್ಥಿನಿಯರು ಸಾಧಕಿಯರಾಗಿದ್ಧಾರೆ.



ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಅನನ್ಯ 625 ಅಂಕ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.


ಈಕೆ ಗುತ್ತಿಗಾರು ದುರ್ಗೇಶ್ ಹಾಗೂ ವೇದಾವತಿ ದಂಪತಿಗಳ ಪುತ್ರಿ.


ಇದೇ ವೇಳೆ, ವೆನೆಸಾ ಶರಿನಾ ಡಿಸೋಜಾ ಕೂಡ 625ರಲ್ಲಿ 625 ಅಂಕ ಗಳಿಸಿ ಸಾಧಕಿ ಎಂಬ ಹೆಮ್ಮೆಗೆ ಪಾತ್ರರಾಗಿದ್ಧಾರೆ.


ಈಕೆಯೂ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ. ಸುಬ್ರಹ್ಮಣ್ಯ ದ ವೆಲೇರಿಯನ್ ಡಿಸೋಜಾ ಮತ್ತು ತೆರೆಸಾ ಡಿಸೋಜಾ ದಂಪತಿಗಳ ಪುತ್ರಿ.