-->

Priest post open for everybody-  ಅರ್ಚಕ ಹುದ್ದೆಗೆ ಎಲ್ಲಾ ಜಾತಿಯೂ ಅರ್ಹ: ಅರ್ಚಕರ ನೇಮಕಾತಿಯಲ್ಲಿ ಎಂ.ಕೆ. ಸ್ಟ್ಯಾಲಿನ್ ಕ್ರಾಂತಿಕಾರಿ ಹೆಜ್ಜೆ

Priest post open for everybody- ಅರ್ಚಕ ಹುದ್ದೆಗೆ ಎಲ್ಲಾ ಜಾತಿಯೂ ಅರ್ಹ: ಅರ್ಚಕರ ನೇಮಕಾತಿಯಲ್ಲಿ ಎಂ.ಕೆ. ಸ್ಟ್ಯಾಲಿನ್ ಕ್ರಾಂತಿಕಾರಿ ಹೆಜ್ಜೆ



ಚೆನ್ನೈ: ಅರ್ಚಕರ ನೇಮಕಾತಿಯಲ್ಲಿ ಕೇರಳದ ಬಳಿಕ ತಮಿಳುನಾಡು ಕೂಡ ಕ್ರಾಂತಿಕಾರಕ ಹೆಜ್ಜೆಯನ್ನು ಇಟ್ಟಿದೆ. ಎಲ್ಲ ಜಾತಿಯೂ ಅರ್ಚಕ ಹುದ್ದೆಗೆ ಅರ್ಹತೆ ಹೊಂದಿದೆ ಎಂದು ಹೇಳುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಪ್ರಣಾಳಿಕೆಯ ಜಾರಿ ಕುರಿತು ಸ್ಪಷ್ಟ ಸಂಕೇತ ನೀಡಿದ್ದಾರೆ.


ಎಲ್ಲಾ ಜಾತಿಯವರನ್ನು ಸರ್ಕಾರದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ದೇವಸ್ಥಾನಗಳಲ್ಲಿ ಅರ್ಚಕರಾಗಿ ನೇಮಿಸುವ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಡಿಎಂಕೆ ಸರ್ಕಾರವು ಶನಿವಾರ ವಿವಿಧ ಸಮುದಾಯಗಳ 24 ತರಬೇತಿ ಪಡೆದ 'ಅರ್ಚಕರನ್ನು' ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಿದೆ.


ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನೇಮಕಾತಿ ಆದೇಶಗಳನ್ನು 75 ಜನರಿಗೆ ನೀಡಿದ್ದು, ವಿವಿಧ ವರ್ಗಗಳ ಅಡಿಯಲ್ಲಿ 208 ಹುದ್ದೆಗಳಿಗೆ ನೇಮಕಾತಿ ಮಾಡಿದ್ದಾರೆ. ನೇಮಕಾತಿಯಲ್ಲಿ ಔಪಚಾರಿಕವಾಗಿ ತರಬೇತಿ ಪೂರ್ಣಗೊಳಿಸಿದ ವಿವಿಧ ಜಾತಿಯ 24 ಅರ್ಚಕರೂ ಸೇರಿದ್ದಾರೆ.


24 ಮಂದಿ ಆಕಾಂಕ್ಷಿಗಳು ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಲು ತರಬೇತಿ ಪಡೆದಿದ್ದಾರೆ. ಇತರ 34 ಮಂದಿ ಇತರ 'ಪಾಠ ಶಾಲೆಗಳಲ್ಲಿ' ಅರ್ಚಕ ತರಬೇತಿ ಪೂರ್ಣಗೊಳಿಸಿದ್ದಾರೆ. 208 ನೇಮಕಾತಿಗಳಲ್ಲಿ ಭಟ್ಟಾಚಾರ್ಯರು, ಒಡುವರು, ಪೂಜಾರಿಗಳು, ತಾಂತ್ರಿಕರು ಮತ್ತು ಕಚೇರಿ ಸಹಾಯಕರು ಸೇರಿದ್ದು, ಸೂಕ್ತ ನೇಮಕಾತಿ ಪ್ರಕ್ರಿಯೆ ಬಳಿಕ ನೇಮಕವಾಗಿದೆ ಎಂದು ಸರ್ಕಾರ ಹೇಳಿದೆ.


ಇನ್ನೂ ತಮಿಳುನಾಡಿನಲ್ಲಿ ಅಧಿಕಾರ ವಹಿಸಿಕೊಂಡಿರುವ ಎಂ.ಕೆ.ಸ್ಟಾಲಿನ್ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದ್ದು, ಜನರ ದುಡ್ಡಿನಿಂದ ನಡೆಯುವ ದೇವಸ್ಥಾನಗಳಲ್ಲಿ ಅರ್ಚಕರ ಹುದ್ದೆ ನಿರ್ದಿಷ್ಟ ಜಾತಿಗೆ ಎಂಬ ಸಾಮಾಜಿಕ ಕಟ್ಟಳೆ ಮುರಿದಿದ್ದಾರೆ. ಎಲ್ಲ ಜಾತಿಯೂ ಸಮಾನ.. ಹಾಗಾಗಿ ಎಲ್ಲ ಜಾತಿಯವರನ್ನು ಅರ್ಚಕ ಹುದ್ದೆಗೆ ನೇಮಿಸುವ ಮಹತ್ವದ ಮಾದರಿ ಹೆಜ್ಜೆಯನ್ನಿಟ್ಟಿದೆ.

Ads on article

Advertise in articles 1

advertising articles 2

Advertise under the article