Renukacharya- ಲಾಬಿ ಮಾಡಿದ್ದರೆ ನಾನೂ ಸಚಿವನಾಗುತ್ತಿದ್ದೆ- ಗದ್ಗದಿತರಾದ ಮಾಜಿ ಸಚಿವ ರೇಣುಕಾಚಾರ್ಯ




ಬೆಂಗಳೂರು: ಕಾಡಿ ಬೇಡಿ ಮಂತ್ರಿಯಾಗುವ ಅವಶ್ಯಕತೆ ನನಗಿಲ್ಲ, ಲಾಬಿ ಮಾಡಿದ್ರೆ, ನಾನು ಕೂಡ ಸಚಿವನಾಗುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪ್ತ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಗದ್ಗದಿತರಾಗಿದ್ದಾರೆ.


ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ತಮಗೆ ಸ್ಥಾನ ಕೈತಪ್ಪಿದ ಬೆನ್ನಲ್ಲೇ ರೇಣುಕಾಚಾರ್ಯ ಮಾಧ್ಯಮದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.



ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸಬಾರದು ಎಂದು ಸಹಿ ಸಂಗ್ರಹ ಮಾಡಿರುವ ತಮಗೆ ಸಚಿವ ಸ್ಥಾನ ಕೈತಪ್ಪಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, ತಾವು ಈಗ ಏನೇ ಮಾತನಾಡಿದರೂ, ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನದಲ್ಲಿ ಮಾತನಾಡಿದ್ದೇನೆ ಎಂದು ಭಾವಿಸಬಹುದು. ಹಾಗಾಗಿ, ಈಗ ನಡೆದ ಘಟನೆಗಳ ಬಗ್ಗೆ ಕೆದಕುವುದು ಬೇಡ ಎಂದು ಹೇಳಿದರು.


ನನಗೆ ಅಧಿಕಾರಕ್ಕಾಗಿ ಅಂಟಿಕೊಳ್ಳುವ ಜಾಯಮಾನ ಇಲ್ಲ. ನಾನು ಜನಸೇವೆ ಮಾಡುತ್ತೇನೆ. ಅಧಿಕಾರ ನನ್ನ ಹಿಂದೆ ಬರಬೇಕು ಎಂದು ಹೇಳಿದರು.



ಆತ್ಮಸಾಕ್ಷಿಗೆ ವಿರುದ್ಧವಾಗಿ ಅಧಿಕಾರಕ್ಕಾಗಿ ನಾನು ಲಾಬಿ ಮಾಡಿಲ್ಲ. ಕ್ಷೇತ್ರದಲ್ಲಿ ಕೆರೆ ಕಟ್ಟೆ ಹೊಡೆದು ಬೆಳೆ ನಾಶ ಆಗಿತ್ತು. ಅಲ್ಲಿ ಸಮೀಕ್ಷೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ ಇಲ್ಲಿಗೆ ಬಂದಿದ್ದೇನೆ ಎಂದು ಅವರು ನೋವಿನಿಂದ ಹೇಳಿದರು.


ಈ ಮೂಲಕ, ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ವಂಚಿತರಾಗಿರುವ ಬಗ್ಗೆ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದರು.

BREAKING NEWS
Loading latest news...
Join our WhatsApp Channel Powered By : Online Pudu