ಸರ್ಕಾರಿ ಸ್ವಾಮ್ಯದ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ನಿಮಗೆ ಉದ್ಯೋಗ ಬೇಕೆ...? ನಿಮ್ಮಲ್ಲಿ ಐಟಿಐ ಡಿಪ್ಲೊಮಾ, ಪದವಿ ಅಥವಾ ಸ್ನಾತಕೋತ್ತರ ಪದವಿ ಇದೆಯೇ..?
ಹಾಗಿದ್ದರೆ ತಡ ಮಾಡಬೇಡಿ. ತಕ್ಷಣ ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ..
ಹುದ್ದೆಗಳ ವಿವರ-
ಐಟಿಐ ಡಿಪ್ಲೊಮಾ, ಪದವಿ ಹಾಗೂ ಮಾನವ ಸಂಪನ್ಮೂಲ ವಿಭಾಗದಲ್ಲಿ ಟ್ರೈನಿ ಅಪ್ರೆಂಟಿಸ್‌ಗಳ ನೇಮಕಾತಿಗೆ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಅರ್ಜಿ ಆಹ್ವಾನಿಸಿದೆ.
27 ವರ್ಷ ಮೀರಿರದ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ವಿದ್ಯಾರ್ಹತೆಯ ದಾಖಲೆಯೊಂದಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿ ಸಡಿಲಿಕೆಯ ಬಗ್ಗೆ ನಿಯಮ ಅನ್ವಯಿಸಲಿದೆ. ಸಾಮಾನ್ಯ, ಇತರ ಹಿಂದುಳಿದ ಪುರುಷ ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕದೊಂದಿಗೆ ಹಾಗೂ ಎಸ್‌ಸಿ ಎಸ್‌ಟಿ, ವಿಕಲಚೇತನದರು ಹಾಗೂ ಮಾಜಿಸೈನಿಕರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಬಳಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪವರ್ ಗ್ರಿಡ್ 1110 ಅಪ್ರೆಂಟಿಸ್ ಗಳ ನೇಮಕ
ಲಿಖಿತ ಪರೀಕ್ಷೆ, ಕಂಪ್ಯೂಟರ್ ಟೆಸ್ಟ್ ಮೂಲಕ ನೇರ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಸಲು ಕಡೇ ದಿನ: ಆಗಸ್ಟ್ 31, 2021