ಮಂಗಳೂರಿನ ಪದವು ಕುಲಶೇಖರ ಚೌಕಿ ಎಂಬಲ್ಲಿರುವ ಕಾಂಚನಾ ಗಂಗಾ ಟ್ರೇಡರ್ಸ್ ಎಂಬ ಗೋದಾಮಿನ ಕೊಠಡಿಯಲ್ಲಿ ಅಕ್ರಮ ಸ್ಫೋಟಕ ಮತ್ತು ಪಟಾಕಿ ಸಂಗ್ರಹ ಪತ್ತೆಯಾಗಿದೆ.
ಈ ಬಗ್ಗೆ ಕಂಕನಾಡಿ ನಗರ ಠಾಣಾ ಪೊಲೀಸರು ನಡೆಸಿದ ದಾಳಿಯಲ್ಲಿ ಬಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಪದವು ಕುಲಶೇಖರ ಚೌಕಿ ಎಂಬಲ್ಲಿರುವ ಕಾಂಚನಾ ಗಂಗಾ ಟ್ರೇಡರ್ಸ್ ಎಂಬ ಗೋದಾಮಿನ ಕೊಠಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸ್ಪೋಟಕ, ಪಟಾಕಿಯನ್ನು ದಾಸ್ತಾನು ಮಾಡಲಾಗಿತ್ತು.
ಈ ವಸ್ತುಗಳನ್ನು ಮಾರಾಟ ಮಾಡಿ ಹಣಗಳಿಸುವ ಉದ್ದೇಶದಿಂದ ಅಕ್ರಮವಾಗಿ ದಾಸ್ತಾನು ಇರಿಸಿಕೊಂಡಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕಂಕನಾಡಿ ನಗರ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, ಗೋದಾಮಿನ ಕೊಠಡಿಯಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸ್ಪೋಟಕ, ಪಟಾಕಿ ದಸ್ತಾನು ಮಾಡಲಾಗಿದ್ದು, ವಿವಿಧ ಹೆಸರಿನ ಸುಮಾರು 4,31,630/- ರೂಪಾಯಿ ಮೌಲ್ಯದ ಸೊತ್ತನ್ನು ವಶಕ್ಕೆ ಪಡೆಯಲಾಗಿದೆ.




