free skill Training- ಆಗಸ್ಟ್ 6 ರಿಂದ “ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ” ಯಡಿ ಉಚಿತ ಕೌಶಲ್ಯ ತರಬೇತಿ




ಮಂಗಳೂರು: ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ “ಸಿಸ್ಕೊ ಸರ್ಟಿಫೈಡ್ ನೆಟ್‍ವರ್ಕ್ ಅಸೋಸಿಯೇಟ್ (ಸಿ.ಸಿ.ಎನ್.ಎ), ಸಿಸ್ಕೊ ಐ.ಟಿ. ಎಸೆನ್ಸಿಯಲ್ಸ್, ಬೇಸಿಕ್ ವೆಲ್ಡಿಂಗ್, ಟಿಗ್ ವೆಲ್ಡಿಂಗ್, ಮಿಗ್ ವೆಲ್ಡಿಂಗ್, ರೆಫ್ರಿಜರೇಶನ್ ಮತ್ತು ಏರ್‍ಕಂಡೀಷನಿಂಗ್ ಟೆಕ್ನಿಷಿಯನ್, ಟ್ಯಾಲಿ” ಕೋರ್ಸ್‍ಗಳಿಗೆ ಉಚಿತ ಉದ್ಯೋಗಾಧಾರಿತ ಅಲ್ಪಾವಧಿ ಕೌಶಲ್ಯ ತರಬೇತಿ ಕಾರ್ಯಕ್ರಮದ ಹೊಸ ಬ್ಯಾಚ್ ಆಗಸ್ಟ್ 6 ರಿಂದ ಪ್ರಾರಂಭಗೊಳ್ಳಲಿದೆ.


       ಸಿ.ಸಿ.ಎನ್.ಎ ತರಬೇತಿಗೆ ಕಂಪ್ಯೂಟರ್ ಸೈನ್ಸ್ / ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ಪದವಿಯನ್ನು, ಉಳಿದ ಕೋರ್ಸ್‍ಗಳಿಗೆ ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಹೊಂದಿರುವ 18 ರಿಂದ 35 ವಯೋಮಿತಿಗೊಳಪಟ್ಟ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


      ಆಸಕ್ತ ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಮಂಗಳೂರಿನ ಕದ್ರಿ ಐ.ಟಿ.ಐ ಕ್ಯಾಂಪಸ್‍ನಲ್ಲಿರುವ ಕೆ.ಜಿ.ಟಿ.ಟಿ.ಐ ಕಚೇರಿ ದೂ.ಸಂ. 0824-2211477, 8277741731 ಸಂಪರ್ಕಿಸಬಹುದು ಎಂದು ನಗರದ ಕೆ.ಜಿ.ಟಿ.ಟಿ.ಐ. ನಿರ್ದೇಶಕರ ಪ್ರಕಟಣೆ ತಿಳಿಸಿದೆ.