SC on bail for gold smugglers- ಎನ್‌ಐಎಗೆ ಮುಖಭಂಗ: ಚಿನ್ನ ಕಳ್ಳಸಾಗಣೆದಾರರ ಜಾಮೀನು ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ





12 ಮಂದಿ ಚಿನ್ನ ಕಳ್ಳಸಾಗಣೆದಾರರಿಗೆ ಜಾಮೀನು ನೀಡಿದ ತೀರ್ಪನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 



ಕೇರಳದಲ್ಲಿ ಸಿಕ್ಕಿ ಬಿದ್ದಿರುವ 12 ಮಂದಿ ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿತ್ತು.



ಈ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್.ಐ.ಎ.) ಸುಪ್ರೀಂ ಕೋರ್ಟ್ ಕದ ತಟ್ಟಿತ್ತು.



ಜಾಮೀನು ನೀಡಿದ ತೀರ್ಪನ್ನು ಸಮರ್ಥಿಸಿಕೊಂಡಿರುವ ಸುಪ್ರೀಂ ಕೋರ್ಟ್, ಇವರೆಲ್ಲ ಸರ್ಕಾರಿ ಉದ್ಯೋಗಿಗಳು. ಅವರಿಗೆ ನೀಡಿರುವ ಜಾಮೀನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.



ಆದರೆ, ಇದೇ ತೀರ್ಪಿನ ಭಾಗವಾಗಿರುವ 'ಚಿನ್ನ ಸಾಗಣೆ ಭಯೋತ್ಪಾದನೆ ವ್ಯಾಪ್ತಿಗೆ ಬರುವುದಿಲ್ಲ' ಎಂಬ ಕೇರಳ ಉಚ್ಚ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸಲು ಒಪ್ಪಿಕೊಂಡಿದೆ.



ಚಿನ್ನ ಕಳ್ಳ ಸಾಗಣೆ ಸೀಮಾ ಸುಂಕ ವ್ಯಾಪ್ತಿಗೆ ಬರುತ್ತದೆ. ಅಕ್ರಮ ಚಟುವಟಿಕೆ ನಿಗ್ರಹ ಕಾಯ್ದೆ(ಯುಎಪಿಎ) ಯಡಿ ಬರುವುದಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು.



ಈ ಚಟುವಟಿಕೆಯಲ್ಲಿ ಭಯೋತ್ಪಾದಕರ ಕೈವಾಡ ಇದೆಯೇ ಎಂಬುದನ್ನು ಪರಿಶೀಲಿಸುತ್ತಿರುವ ಎನ್‌ಐಎ, ಈ ಕೃತ್ಯವನ್ನೂ ಅದೇ ದೃಷ್ಟಿಕೋನದಲ್ಲಿ ತನಿಖೆಗೆ ಒಳಪಡಿಸಿತ್ತು.