Tokyo Olympics- ಟೋಕಿಯೋ ಒಲಿಂಪಿಕ್ಸ್: ಪದಕ ಪಟ್ಟಿಯಲ್ಲಿ ಭಾರತಕ್ಕೆ 60ನೇ ಸ್ಥಾನ
7/31/2021 12:07:00 PM
ಮೂರನೇ ದಿನದ ಮುಕ್ತಾಯಕ್ಕೆ ಭಾರತ ಪದಕ ಪಟ್ಟಿಯಲ್ಲಿ 60ನೇ ಸ್ಥಾನ ಸಂಪಾದಿಸಿದೆ.
21 ಚಿನ್ನದ ಪದಕಗಳನ್ನು ಬಾಚಿದ ಚೀನಾ ಮೊದಲ ಸ್ಥಾನದಲ್ಲಿ ಇದ್ದರೆ, ಜಪಾನ್ 17 ಚಿನ್ನದ ಪದಕಗಳೊಂದಿಗೆ ಎರಡನೇ ಹಾಗೂ 16 ಚಿನ್ನದ ಪದಕ ಗೆದ್ದಿರುವ ಅಮೇರಿಕ ಮೂರನೇ ಸ್ಥಾನ ಗಳಿಸಿದೆ.
ಭಾರತ ಇದುವರೆಗೆ ಏಕೈಕ ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ. ಇದೇ ವೇಳೆ, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಚಿನ್ನದ ಪದಕ ವಂಚಿತೆಯಾಗಿದ್ದು, ಕಂಚಿನ ಪದಕಕ್ಕಾಗಿ ಮತ್ತೊಂದು ಹೋರಾಟ ನಡೆಸಲಿದ್ದಾರೆ.