-->
Nazir Sab Statue unveiled- ಐದೇ ನಿಮಿಷ ನಡೆದ ನಜೀರ್ ಸಾಬ್ ಪ್ರತಿಮೆ ಅನಾವರಣ ಕಾರ್ಯ: ಸಚಿವರ ಗುಟ್ಟಾದ ಕಾರ್ಯಕ್ರಮ?

Nazir Sab Statue unveiled- ಐದೇ ನಿಮಿಷ ನಡೆದ ನಜೀರ್ ಸಾಬ್ ಪ್ರತಿಮೆ ಅನಾವರಣ ಕಾರ್ಯ: ಸಚಿವರ ಗುಟ್ಟಾದ ಕಾರ್ಯಕ್ರಮ?


ಗ್ರಾಮೀಣಾಭಿವೃದ್ಧಿಯ ಹರಿಕಾರ ಮಾಜಿ ಸಚಿವ ಅಬ್ದುಲ್ ನಜೀರ್ ಸಾಬ್ ಅವರ ಪ್ರತಿಮೆ ಕೊನೆಗೂ ಸ್ಥಾಪನೆಯಾಗಿದೆ. ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ (ANSSIRD & PR)ಯ ಆವರಣದಲ್ಲಿ ಈ ಪ್ರತಿಮೆ ಸ್ಥಾಪನೆಯಾಗಿದೆ.ರಾಜ್ಯದ ಎಲ್ಲ ನಗರದ ಬೀದಿ ಬೀದಿಗೂ ನಳ್ಳಿ ನೀರಿನ ಸಂಪರ್ಕ ಕಲ್ಪಿಸಿದ ಈ ಮಹಾನ್ ಮುತ್ಸದ್ದಿಯ ಪ್ರತಿಮೆ ಅನಾವರಣ ಕಾರ್ಯ ಐದು ನಿಮಿಷದಲ್ಲಿ ಮುಗಿದುಹೋಯಿತು.ನಜೀರ್ ಸಾಬ್ ಅವರ ಪ್ರತಿಮೆ ಯಾವತ್ತೋ ANSSIRD & PR ಸಂಸ್ಥೆಯ ಆವರಣದಲ್ಲಿ ಸ್ಥಾಪನೆ ಆಗಬೇಕಿತ್ತು. ತುಂಬ ತಡವಾಗಿ ಆಗಿದೆ. ಇದಕ್ಕೆ ಕಾರಣರು ಯಾರು ಎನ್ನುವುದು ನಮಗೆ ಗೊತ್ತು. ಪ್ರತಿಮೆ ಸ್ಥಾಪಿಸಲು ಕಾಳಜಿ ವಹಿಸಿದವರು ಯಾರು ಎನ್ನುವುದು ಕೂಡ ಗೊತ್ತು ಎಂದು ನಜೀರ್ ಸಾಬ್ ಆದರ್ಶದ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಈ ನಡುವೆ ಸಚಿವರು ಯಾರಿಗೂ ಹೇಳದೆ ಗುಟ್ಟಾಗಿ ಬಂದು ಅನಾವರಣ ಮಾಡಿದ್ದಾರೆ. ಕೇವಲ 5 ನಿಮಿಷದ ಕಾರ್ಯಕ್ರಮ..!! ಪ್ರತಿಮೆ ಅನಾವರಣ ಸಂದರ್ಭದಲ್ಲಿ ನಜೀರ್ ಸಾಬ್ ಅವರಿಗೆ ಕನಿಷ್ಟ ಒಂದು ನುಡಿ ನಮನವನ್ನೂ ಮಾಡಲಿಲ್ಲ. ಮಾಧ್ಯಮ ಪ್ರತಿನಿಧಿಗಳಿಗೂ ಆಹ್ವಾನ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪ ಮಾಡಿದ್ದಾರೆ.

ಈ ನಡುವೆ ನಜೀರ್ ಸಾಬ್ ಅವರ ಪುತ್ತಳಿ ಮುಂದೆ ಸನ್ಮಾನ್ಯ ಈಶ್ವರಪ್ಪನವರು ತಲೆ ಬಾಗಿ ಕೈ ಮುಗಿದು ನಿಂತಿರುವುದು ಮಾತ್ರ ಸಮಾಧಾನ ತರುವಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article