-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Judicial Staff Donation to Covid Fund- ಕರ್ನಾಟಕ ನ್ಯಾಯಾಂಗದ ವತಿಯಿಂದ ಸಿಎಂ ಕೋವಿಡ್ ಫಂಡ್‌ಗೆ 3.38 ಕೋಟಿ ರೂ. ದೇಣಿಗೆ

Judicial Staff Donation to Covid Fund- ಕರ್ನಾಟಕ ನ್ಯಾಯಾಂಗದ ವತಿಯಿಂದ ಸಿಎಂ ಕೋವಿಡ್ ಫಂಡ್‌ಗೆ 3.38 ಕೋಟಿ ರೂ. ದೇಣಿಗೆ


ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆಯ ಬೃಹತ್ ಕೊಡುಗೆ

ಮುಖ್ಯಮಂತ್ರಿಗಳ ಕೋವಿಡ್‌ -19 ಪರಿಹಾರ ನಿಧಿಗೆ ವೇತನದ ಪಾಲು

3.38 ಕೋಟಿ ರೂಪಾಯಿಗೂ ಅಧಿಕ ಮೊತ್ತದ ದೇಣಿಗೆಯ ಕೊಡುಗೆ

ಕರ್ನಾಟಕ ನ್ಯಾಯಾಂಗದ ವತಿಯಿಂದ ಸಿಎಂ ಕೋವಿಡ್ ಫಂಡ್‌ಗೆ 3.38 ಕೋಟಿ ರೂ. ದೇಣಿಗೆ





ಕರ್ನಾಟಕ ನ್ಯಾಯಾಂಗದ ಕಡೆಯಿಂದ ಕೋವಿಡ್‌ -19 ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಮಾಡಿದ ಮನವಿಗೆ ಕರ್ನಾಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿಗಳು; ರಾಜ್ಯದ ಸಮಸ್ತ ನ್ಯಾಯಾಂಗ ಅಧಿಕಾರಿಗಳು; ಹೈಕೋರ್ಟ್ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಸ್ತ ಸಿಬ್ಬಂದಿ ವರ್ಗದವರು ಸ್ಪಂದಿಸಿದ್ದು ₹33812972-00 ಮೊತ್ತದ ದೇಣಿಗೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ.





ಕನಾ೯ಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿಗಳು ನೀಡಿದ ದೇಣಿಗೆ ₹11,60,000/_ ಆಗಿರುತ್ತದೆ. ರಾಜ್ಯದ ನ್ಯಾಯಾಂಗ ಅಧಿಕಾರಿಗಳು ತಮ್ಮ 3 ದಿನಗಳ ವೇತನವನ್ನು ದೇಣಿಗೆ ರೂಪದಲ್ಲಿ ನೀಡಿದ್ದು ಅದರ ಒಟ್ಟು ಮೊತ್ತ ರೂ. 1,15,32,365/- ಆಗಿದೆ.





ಹೈಕೋರ್ಟ್ ಸಿಬ್ಬಂದಿ ದೇಣಿಗೆಯಾಗಿ ನೀಡಿದ ತಮ್ಮ ಒಂದು ದಿನದ ವೇತನ ₹ 4397789/_ಆಗಿದೆ. ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ನೀಡಿದ ತಮ್ಮ ಒಂದು ದಿನದ ವೇತನ ₹16622818/ಆಗಿರುತ್ತದೆ.










ನ್ಯಾಯಾಂಗ ಇಲಾಖೆಯ ವಿವಿಧೋದ್ದೇಶ ಸಹಕಾರ ಸಂಘ ರೂ 1ಲಕ್ಷ ದೇಣಿಗೆಯನ್ನು ನೀಡಿದೆ. *ರಾಜ್ಯ ನ್ಯಾಯಾಂಗದ ವತಿಯಿಂದ ನೀಡಿದ ಒಟ್ಟು ದೇಣಿಗೆಯ ಮೊಬಲಗು ರೂ.3;38;12;972/_ ಆಗಿರುತ್ತದೆ



HRMS ನಲ್ಲಿ ಜೂನ್ 2021 ನೆಯ ತಿಂಗಳ ವೇತನದಲ್ಲಿ ಮೇಲ್ಕಾಣಿಸಿದ ಮೊತ್ತವನ್ನು ವೇತನದಿಂದ ಕಡಿತ ಮಾಡಲಾಗಿದೆ.



ಕೋವಿಡ್‌ -19 ಪರಿಹಾರ ನಿಧಿಗೆ ವೇತನದಿಂದ ದೇಣಿಗೆ ಮೊತ್ತವನ್ನು ಕಟಾವಣೆ(ಕಡಿತ) ಮಾಡುವ ಮೊದಲು ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ನೀಡಿದ ಅಭಿಪ್ರಾಯವನ್ನು ಕೇಳಲಾಗಿತ್ತು.



ಮಾನ್ಯ ಮುಖ್ಯನ್ಯಾಯಮೂರ್ತಿಗಳ ಆಶಯದಂತೆ ನ್ಯಾಯಾಂಗ ನೌಕರರು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ನೀಡಿ ಕೋವಿಡ್‌ನಿಂದ ಆರ್ಥಿಕವಾಗಿ ಬಳಲಿರುವ ರಾಜ್ಯದ ಜನಸಾಮಾನ್ಯರ ಸಂಕಷ್ಟಕ್ಕೆ ಮಿಡಿದಿರುವ ಅವರ ನಡೆ ಪ್ರಶಂಸಾರ್ಹ ಹಾಗೂ ಮಾದರಿಯಾಗಿದೆ.


Ads on article

Advertise in articles 1

advertising articles 2

Advertise under the article

ಸುರ