-->

High Court SOP- ಕೋರ್ಟ್ ಕಲಾಪದಲ್ಲಿ ಬದಲಾವಣೆ: ಹೈಕೋರ್ಟ್ ನೂತನ ಮಾರ್ಗಸೂಚಿಯಲ್ಲಿ ಏನೇನಿದೆ...?

High Court SOP- ಕೋರ್ಟ್ ಕಲಾಪದಲ್ಲಿ ಬದಲಾವಣೆ: ಹೈಕೋರ್ಟ್ ನೂತನ ಮಾರ್ಗಸೂಚಿಯಲ್ಲಿ ಏನೇನಿದೆ...?



ಕೋರ್ಟ್ ಕಲಾಪದಲ್ಲಿ ಬದಲಾವಣೆ: ಹೈಕೋರ್ಟ್ ನೂತನ ಮಾರ್ಗಸೂಚಿಯಲ್ಲಿ ಏನೇನಿದೆ...?




ಕೊರೋನಾ ಸೋಂಕು ಕಳೆದ 7 ದಿನಗಳಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಇರುವ ಕರ್ನಾಟಕದ 10 ಜಿಲ್ಲೆಗಳಲ್ಲಿ ಜೂನ್ 6, 2021ರ ಮಾರ್ಗಸೂಚಿ ಅನ್ವಯವಾಗಲಿದ್ದು, ಹೆಚ್ಚುವರಿಯಾಗಿ ಈ ನಿಯಮಗಳು ಜಾರಿಯಲ್ಲಿ ಇರುತ್ತವೆ.



ಜಿಲ್ಲೆಗಳು: ಬೆಳಗಾವಿ, ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು-ಮಡಿಕೇರಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ



ಈ ಮೇಲಿನ 10 ಜಿಲ್ಲೆಗಳಲ್ಲಿ ದಿನವೊಂದಕ್ಕೆ 5 ಕನಿಷ್ಟ ಸಾಕ್ಷಿದಾರರ ಮಿತಿಯನ್ನು ತೆಗೆದುಹಾಕಲಾಗಿದೆ. ಕೋರ್ಟ್‌ನ ಉಭಯ ಕಲಾಪದಲ್ಲೂ ಸಾಕ್ಷಿದಾರರ ಸಾಕ್ಷ್ಯ ವಿಚಾರಣೆ ನಡೆಸಬಹುದಾಗಿದೆ.


ಈ ಮೇಲಿನ 10 ಜಿಲ್ಲೆಗಳಲ್ಲಿ, ಪ್ರತಿ ದಿನ ಗರಿಷ್ಟ 30 ಕೇಸುಗಳ ವಿಚಾರಣೆಯ ಮಿತಿಯನ್ನು ಗರಿಷ್ಟ 40ಕ್ಕೆ ಹೆಚ್ಚಿಸಲಾಗಿದೆ.







ಇದೇ ವೇಳೆ, ಕೊರೋನಾ ಸೋಂಕು ಕಳೆದ 7 ದಿನಗಳಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಇರುವ ಕರ್ನಾಟಕದ 20 ಜಿಲ್ಲೆಗಳಲ್ಲಿ ಈ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.



ಜಿಲ್ಲೆಗಳು: ಬಾಗಲಕೋಟೆ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಉ.ಕ.-ಕಾರವಾರ, ವಿಜಯಪುರ, ಯಾದಗೀರ್, ಬೆಂಗಳೂರು ಗ್ರಾಮಾಂಗರ, ದಾವಣಗೆರೆ, ಮಂಡ್ಯ.


ಈ ಮೇಲಿನ 20 ಜಿಲ್ಲೆಗಳಲ್ಲಿ, ಈ ಹಿಂದೆ ವಿಧಿಸಲಾದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಸೋಮವಾರದಿಂದ ಈ ಜಿಲ್ಲೆಗಳಲ್ಲಿ ನಿರ್ಬಂಧರಹಿತ ಕೋರ್ಟ್ ಕಲಾಪಗಳು ಜಾರಿಯಲ್ಲಿ ಇರುತ್ತವೆ.



ಪ್ರತ್ಯೇಕ ದ್ವಾರ, ಸ್ಯಾನಿಟೈಸೇಷನ್, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಮೊದಲಾದ ನಿಯಮಗಳನ್ನು ಈ ಎಲ್ಲ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಈ ನಿಯಮಗಳನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಅಥವಾ ಹಿರಿಯ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ಪಾಲಿಸತಕ್ಕದ್ದು. ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ನ್ಯಾಯಾಧೀಶರಿಗೆ ಅಧಿಕಾರ ನೀಡಲಾಗಿದೆ.



ಜೆರಾಕ್ಸ್ ಕೌಂಟರ್, ಕ್ಯಾಂಟೀನ್, ವಕೀಲರ ಸಂಘ ಸಹಿತ ಎಲ್ಲ ಸೇವೆಗಳು ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗುವುದು. ಆದರೆ, ಸಂಬಂಧಪಟ್ಟ ಎಲ್ಲರೂ ಎರಡೂ ಲಸಿಕೆ ಪಡೆದಿರುವುದನ್ನು ಖಾತ್ರಿ ಪಡಿಸಬೇಕು.

Ads on article

Advertise in articles 1

advertising articles 2

Advertise under the article