-->

Dowry banned-  ಸರ್ಕಾರಿ ನೌಕರರು ವರದಕ್ಷಿಣೆ ಪಡೆಯುವಂತಿಲ್ಲ!: ಮಹತ್ವದ ಆದೇಶ

Dowry banned- ಸರ್ಕಾರಿ ನೌಕರರು ವರದಕ್ಷಿಣೆ ಪಡೆಯುವಂತಿಲ್ಲ!: ಮಹತ್ವದ ಆದೇಶ

ಸರ್ಕಾರಿ ನೌಕರರು ವರದಕ್ಷಿಣೆ ಪಡೆಯುವಂತಿಲ್ಲ. ಈ ಬಗ್ಗೆ ಕೇರಳ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.



ಸರ್ಕಾರಿ ಕೆಲಸದಲ್ಲಿ ಇರುವ ಯುವಕರು ಮದುವೆಯಾದ ಒಂದು ತಿಂಗಳ ಒಳಗೆ ತಾನು ಯಾವುದೇ ವರದಕ್ಷಿಣೆ ಪಡೆದಿಲ್ಲ ಎಂಬ ಅಫಿಡವಿಟ್ ಯಾ ದೃಢೀಕರಣ ಪ್ರಮಾಣ ಪತ್ರವನ್ನು ಸರ್ಕಾರಿ ಕಚೇರಿಗೆ ಒದಗಿಸುವುದನ್ನು ಕಡ್ಡಾಯ ಮಾಡಲಾಗಿದೆ.


ಈ ದೃಢೀಕರಣ ಪತ್ರದೊಂದಿಗೆ ಪತ್ನಿ, ಆಕೆಯ ತಂದೆ ಮತ್ತು ತನ್ನ ತಂದೆಯ ಸಹಿ ಲಗತ್ತಿಸಿರಬೇಕು.




ಕೇರಳದಲ್ಲಿ ಈ ನಿಯಮವನ್ನು ಕಡ್ಡಾಯ ಮಾಡಲಾಗಿದ್ದು, ಸರ್ಕಾರಿ ಕೆಲಸದಲ್ಲಿ ಇರುವ ಯುವಕರು ತಾವು ಮದುವೆಯಾದ ಒಂದು ತಿಂಗಳ ಒಳಗೆ ವರದಕ್ಷಿಣೆ ಪಡೆದಿಲ್ಲ ಎಂಬುದಕ್ಕೆ ಅಫಿಡವಿಟ್ ಹಾಗೂ ಪತ್ನಿ, ಪತ್ನಿ ತಂದೆ ಮತ್ತು ತನ್ನ ತಂದೆಯ ಸಹಿ ಇರುವ ದೃಢೀಕರಣ ಪತ್ರವನ್ನು ಸರ್ಕಾರಿ ಕಚೇರಿ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ರವಾನೆ ಮಾಡಬೇಕು ಎಂದು ಕೇರಳ ಸರ್ಕಾರ ತನ್ನ ಎಲ್ಲಾ ಇಲಾಖೆಗೆ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.



ಕೇರಳ ವರದಕ್ಷಿಣೆ ನಿಷೇಧ ಕಾಯಿದೆ- 2021ನ್ನು ಜಾರಿಗೊಳಿಸಿರುವ ಕೇರಳ ಸರ್ಕಾರ ಜಿಲ್ಲಾ ಮಟ್ಟದಲ್ಲಿ ವರದಕ್ಷಿಣೆ ವಿರೋಧಿ ದಳವನ್ನು ರಚಿಸಿದ್ದು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಇದರ ಮುಖ್ಯಸ್ಥರಾಗಿರುತ್ತಾರೆ.





ಕಳೆದ ಜೂನ್‌ನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಮೂವರು ಯುವತಿಯರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದ್ದು, ಸರ್ಕಾರದ ಈ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article