ಶನಿವಾರ ದುಲ್-ಹಜ್ಜ್ ತಿಂಗಳ ಚಂದ್ರದರ್ಶನವಾಗದೆ ಇರುವುದರಿಂದ ದುಲ್'ಖ'ಅದ್ ತಿಂಗಳ 30 ಪೂರ್ತಿಯಾಗಿ ಇಂದು ರಾತ್ರಿ (ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ) ದುಲ್ ಹಜ್ಜ್ ತಿಂಗಳ ಚಾಂದ್ 1 ಆಚರಿಸಲು ಮುಸ್ಲಿಂ ಬಾಂಧವರಿಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರು ಕರೆ ನೀಡಿದ್ದಾರೆ.
ಅವರ ನಿರ್ದೇಶನದ ಮೇರೆಗೆ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬರಾದ ಅಲ್'ಹಾಜ್ ಅಬುಲ್ ಅಕ್ರಮ್ ಮುಹಮ್ಮದ್ ಬಾಖವಿ ಉಸ್ತಾದರು ಈ ವಿಷಯ ಪ್ರಕಟಿಸಿದ್ದಾರೆ.
ದಿನಾಂಕ 20-07-2021 ಮಂಗಳವಾರ ಅರಫಾ ದಿವಸ ಉಪವಾಸ ಸುನ್ನತ್ ಇದೆ
ದಿನಾಂಕ 21-07-2021 ಬುಧವಾರ ಈದುಲ್ ಅಝ್ಹಾ(ಬಕ್ರೀದ್)
