
ABVP leader expired- ಎಬಿವಿಪಿ ಮಾಜಿ ರಾಜ್ಯಾಧ್ಯಕ್ಷ, ವಿಎಚ್ ಪಿ ನಾಯಕ ಮನೋಹರ ತುಳಜ ರಾಮ ಇನ್ನಿಲ್ಲ
7/02/2021 12:16:00 PM
ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮಾಜಿ ರಾಜ್ಯ ಅಧ್ಯಕ್ಷ ಮನೋಹರ ತುಳಜಾರಾಮ ಅವರು ಶುಕ್ರವಾರ ವಿಧಿವಶರಾದರು.
ಮಂಗಳೂರಿನ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನಿವಾಸಿಯಾದ ಅವರು ವಿಶ್ವ ಹಿಂದು ಪರಿಷತ್ತಿನ ಮಂಗಳೂರು ಪ್ರಾಂತ ಅಧ್ಯಕ್ಷರಾಗಿಯೂ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು.
ನೇರ ನಡೆ ನುಡಿ, ಸರಳ ಹಾಗೂ ಶಿಸ್ತಿನ ವ್ಯಕ್ತಿತ್ವ ಹೊಂದಿದ್ದ ತುಳಜರಾಮ ಅವರು ಸಂಘಟನೆಯ ಕಾರ್ಯಕರ್ತರ ಅಚ್ಚುಮೆಚ್ಚಿನ ಗುರುಗಳು.
70 ಮತ್ತು 80ರ ದಶಕದಲ್ಲಿ ಅವರು ರಾಜ್ಯಾದ್ಯಂತ ಎಬಿವಿಪಿ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯರಾಗಿದ್ದರು.
ಮಂಗಳೂರಿನಲ್ಲಿ ಎಬಿವಿಪಿ ಸಂಘಟನೆಯನ್ನು ಬಲಪಡಿಸುವಲ್ಲಿ ಅವರ ಸೇವೆ ಅನನ್ಯವಾದದ್ದು. ಕಳೆದ ತಿಂಗಳಷ್ಟೇ ಮನೋಹರ ಅವರ ಪತ್ನಿ ಶ್ಯಾಮಲಾ ಅವರು ನಿಧನರಾಗಿದ್ದರು.