-->

Shave beard; tea seller asks Modi- ಪ್ರಧಾನಿ ಮೋದಿಗೆ 100 ರೂ. ಕಳಿಸಿದ ಟೀ ಮಾರುವವ; ಅದರ ಜೊತೆ ಆತ ನೀಡಿದ ಪತ್ರದ ಡಿಮ್ಯಾಂಡ್ ವೈರಲ್!

Shave beard; tea seller asks Modi- ಪ್ರಧಾನಿ ಮೋದಿಗೆ 100 ರೂ. ಕಳಿಸಿದ ಟೀ ಮಾರುವವ; ಅದರ ಜೊತೆ ಆತ ನೀಡಿದ ಪತ್ರದ ಡಿಮ್ಯಾಂಡ್ ವೈರಲ್!

  • ಪ್ರಧಾನಿಯವರೇ ದಯವಿಟ್ಟು ಗಡ್ಡ ತೆಗೆಸಿಕೊಳ್ಳಿ
  • ಈ ಪತ್ರದೊಂದಿಗೆ ಪ್ರಧಾನಿಗೆ 100 ರೂ. ಕಳುಹಿಸಿದ್ದೇನೆ
  • ಟೀ ವ್ಯಾಪಾರಿ ಅನಿಲ್ ಮೋರೆ
  • ಜನರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಹೀಗೆ ಮಾಡಿದ್ಧೇನೆ





ಮುಂಬೈ: ಕೊರೋನಾ, ಲಾಕ್‌ಡೌನ್ ಸಂಕಷ್ಟದ ನಡುವೆಯೇ ಕೇಂದ್ರ ಸರ್ಕಾರದ ಕ್ರಮಗಳ ಬಗ್ಗೆ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ, ಟೀ ವ್ಯಾಪಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 100 ರೂಪಾಯಿ ಕಳುಹಿಸಿಕೊಟ್ಟಿದ್ದು, ಗಡ್ಡ ತೆಗೆಸಿಕೊಳ್ಳುವಂತೆ ಪತ್ರ ಬರೆದಿದ್ದಾರೆ. ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.



ಟೀ ವ್ಯಾಪಾರಿ ಅನಿಲ್ ಮೋರೆ ಪ್ರಧಾನಿ ನರೇಂದ್ರ ಮೋದಿಗೆ 100 ರೂಪಾಯಿ ಕಳುಹಿಸಿದವರಾಗಿದ್ದಾರೆ. ಪ್ರಧಾನಿ ಗಡ್ಡ ಬೆಳೆಸಿದ್ದಾರೆ. ಅದರಿಂದ ಏನೂ ಪ್ರಯೋಜನವಿಲ್ಲ. ಆದರ, ನಿಜವಾಗಿಯೂ ಏನನ್ನಾದರೂ ಬೆಳೆಸುವುದಾದರೆ ದೇಶದ ಜನತೆಗೆ ಉದ್ಯೋಗಾವಕಾಶಗಳನ್ನು ಬೆಳೆಸಿ... ಲಸಿಕೆಯನ್ನು ಹೆಚ್ಚಿಸಿ... ಈಗಿರುವ ವೈದ್ಯಕೀಯ ಸೌಲಭ್ಯಗಳನ್ನು ಏರಿಕೆ ಮಾಡಿ... ಹೀಗೆಂದು ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.



ಪ್ರಧಾನಿಗಳ ಹುದ್ದೆ ದೇಶದ ಅತ್ಯುನ್ನತ ಹುದ್ದೆಯಾಗಿದೆ. ಪ್ರಧಾನಿ ಹುದ್ದೆ ಬಗ್ಗೆ ಅವರ ಆಡಳಿತದ ಬಗ್ಗೆ ಗೌರವವಿದೆ. ನನ್ನ ದುಡಿಮೆಯಿಂದ ಗಳಿಸಿದ ಆದಾಯದಿಂದ ಮಾಡಿದ ಉಳಿತಾಯದ ಹಣವಾದ 100/- ರೂಪಾಯಿಗಳನ್ನು ನಾನು ಪ್ರಧಾನಿ ಮೋದಿ ಅವರಿಗೆ ಅವರ ಗಡ್ಡ ತೆಗೆಸಿಕೊಳ್ಳುವುದಕ್ಕಾಗಿ ಕಳಿಸುತ್ತಿದ್ದೇನೆ.



ಅವರು ಒಬ್ಬ ಅತ್ಯುನ್ನತ ನಾಯಕ. ಅವರಿಗೆ ಅವಮಾನ ಮಾಡುವುದು ನನ್ನ ಉದ್ದೇಶವಲ್ಲ, ದೇಶದ ಬಡ ಜನತೆ ಎದುರಿಸುತ್ತಿರುವ ತೀವ್ರ ಸಂಕಷ್ಟಗಳ ಬಗ್ಗೆ ಅವರ ಗಮನ ಸೆಳೆಯುವ ಉದ್ದೇಶದಿಂದ ಮಾತ್ರ ಈ ರೀತಿ ಮಾಡಿದ್ದೇನೆ ಎಂದು ಅನಿಲ್ ಮೋರೆ ಹೇಳಿದ್ದಾರೆ.



ಕೋವಿಡ್ 19 ನಿಂದ ತಮ್ಮ ಪರಮಾಪ್ತರು ಹಾಗೂ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವವರಿಗೆ ಕನಿಷ್ಟ 5 ಲಕ್ಷ ರೂಪಾಯಿ ನೀಡಬೇಕು ಹಾಗೂ ಲಾಕ್‌ಡೌನ್ ನಿಂದ ಸಂಕಷ್ಟ ಎದುರಿಸುತ್ತಿರುವವರಿಗೆ ಕನಿಷ್ಟ 30,000 ರೂಪಾಯಿಗಳ ಅನುದಾನ ನೀಡುವುದಕ್ಕೆ ಪ್ರಧಾನಿಗಳಿಗೆ ಪತ್ರದ ಮೂಲಕ ಒತ್ತಾಯ ಮಾಡಿದ್ದೇನೆ ಎಂದು ಅನಿಲ್ ಹೇಳಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article