Prostitution by actress arrested- ವೇಶ್ಯಾವಾಟಿಕೆಗಿಳಿದ ನಟಿಯರಿಬ್ಬರು ಅರೆಸ್ಟ್! ಲಾಕ್ ಡೌನ್ ಟೈಂನಲ್ಲಿ ಹೈಟೆಕ್ ವೇಶ್ಯಾವಾಟಿಕೆ!

ಮುಂಬೈ: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ನಟಿಯರನ್ನು ಥಾಣೆ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.








ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿಮೇರೆಗೆ ನಗರದ ನೌಪಡದಲ್ಲಿನ ಫ್ಲ್ಯಾಟ್ ಮೇಲೆ ಪೊಲೀಸರು ಗ್ರಾಹಕರ ವೇಷದಲ್ಲಿ ತೆರಳಿ ದಾಳಿ ನಡೆಸಿದರು.



ಇಬ್ಬರು ನಟಿಯರು, ಇಬ್ಬರು ಮಹಿಳೆಯರು ಮತ್ತು ಒಬ್ಬ ದಲ್ಲಾಳಿಯನ್ನು ಪೊಲೀಸರು ಬಂಧಿಸಿದ್ದಾರೆ.  ಲಾಕ್ ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ಇಲ್ಲದ ಹಿನ್ನೆಲೆಯಲ್ಲಿ ಈ ದಂಧೆಗೆ ಇಳಿಯಲಾಯಿತು ಎಂದು ನಟಿಯರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.


ಬಂಧಿತ ನಟಿಯರನ್ನು ಅಮೃತಾ ಧಾನೋವಾ(32) ಮತ್ತು ಮಾಡೆಲ್, ನಟಿ ರಿಚಾ ಸಿಂಗ್ ಎಂದು ಗುರುತಿಸಲಾಗಿದೆ.



ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದವರು ಸಿನಿಮಾ ನಟಿಯರನ್ನು ದಂಧೆಗೆ ಬಳಸಿಕೊಳ್ಳುತ್ತಿದ್ದರು.‌ ಒಂದು ರಾತ್ರಿಗೆ 2 ಲಕ್ಷ ಕೇಳಿ ಅಂತಿಮವಾಗಿ 1.80 ಲಕ್ಷಕ್ಕೆ ಫೈನಲ್ ಮಾಡಿ ನಟಿಯರನ್ನು ಗ್ರಾಹಕರ ಬಳಿ ಕಳುಹಿಸುತ್ತಿದ್ದರು.



ಈ ರೀತಿ ದಂಧೆ ನಡೆಸುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಒಬ್ಬ ಬ್ರೋಕರ್ ನನ್ನು 7 ದಿನ ಪೊಲೀಸ್ ಕಸ್ಟಡಿಗೆ ನೀಡಿರುವ ಕೋರ್ಟ್ ನಟಿಯರನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸುವಂತೆ ಹೇಳಿದೆ.