-->

Poster Agitation | ಸ್ಥಳೀಯರಿಗೆ ಉದ್ಯೋಗ: ಕರಾವಳಿಯಲ್ಲಿ ಪೋಸ್ಟರ್ ಚಳವಳಿ, ವ್ಯಾಪಕ ಬೆಂಬಲ

Poster Agitation | ಸ್ಥಳೀಯರಿಗೆ ಉದ್ಯೋಗ: ಕರಾವಳಿಯಲ್ಲಿ ಪೋಸ್ಟರ್ ಚಳವಳಿ, ವ್ಯಾಪಕ ಬೆಂಬಲ





MRPL ಸೇರಿದಂತೆ ಕೈಗಾರಿಕೋದ್ಯಮಗಳ ಉದ್ಯೋಗಳಲ್ಲಿ ತುಳುನಾನಾಡಿನ ಯುವಜನತೆಗೆ ಆದ್ಯತೆ ಮೇರೆಗೆ ಉದ್ಯೋಗ ದೊರೆಯಬೇಕು ಮತ್ತು ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎಂಬ ನೆಲೆಯಲ್ಲಿ ಕರಾವಳಿಯಾದ್ಯಂತ ಮನೆ ಮನೆ ಪೋಸ್ಟರ್ ಚಳವಳಿ ನಡೆದಿದೆ.




ಈ ಚಳವಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಉಪ ಮೇಯರ್ ಮಹಮ್ಮದ್, ಪುರುಷೋತ್ತಮ ಚಿತ್ರಾಪುರ, ಡಿಎಸ್ಎಸ್ ನಾಯಕ ದೇವದಾಸ್, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ ಸಾವಿರಾರು ಮಂದಿ ಪೋಸ್ಟರ್ ಪ್ರದರ್ಶನ ಮಾಡಿ ಚಳವಳಿಯಲ್ಲಿ ಭಾಗವಹಿಸಿದರು.




ಉದ್ಯೋಗದಲ್ಲಿ ಸ್ಥಳೀಯರಿಗೆ ಆಗುತ್ತಿರುವ ವಂಚನೆಯ ವಿರುದ್ದ, ಉದ್ಯೋಗದಲ್ಲಿ ಸ್ಥಳೀಯರಿಗೆ ನ್ಯಾಯಯುತ ಪಾಲು ದೊರೆಯಬೇಕು ಎಂದು ಆಗ್ರಹಿಸಿ ಮನೆ ಮನೆ ಪ್ರತಿಭಟನೆ ನಡೆದಿದೆ.




ಈಗ Mrpl ನಲ್ಲಿ ನಡೆದಿರುವ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವುದು, ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವುದು ನಮ್ಮ ಪ್ರಧಾನ ಹಕ್ಕೊತ್ತಾಯ. ಎರಡೂ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಪ್ರತಿಭಟನೆ ನಡೆಸಲಾಗಿದೆ. ಸಾವಿರಾರು ಜನತೆ ಸ್ವಪ್ರೇರಣೆಯಲ್ಲಿ ಆಂದೋಲನದಲ್ಲಿ ಭಾಗಿಯಾಗಿದ್ದಾರೆ.


"ತುಳುನಾಡ ಅಭಿವೃದ್ದಿಡ್ ತುಳುವಪ್ಪೆ  ಜೋಕುಲೆಗ್ ಮಲ್ಲಪಾಲ್"

ಹಿರಿಯ ದಲಿತ ಹೋರಾಟಗಾರ ಎಂ ದೇವದಾಸ್, ಡಿಎಸ್ಎಸ್ ಜಿಲ್ಲಾ ಸಂಚಾಲಕ ರಘು ಎಕ್ಕಾರು, ಮಾಜಿ  ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ ಮತ್ತಿತರರು Mrpl ಉದ್ಯೋಗ ವಂಚನೆಯ ವಿರುದ್ಧ "ಮನೆ ಮನೆ ಪ್ರತಿಭಟನೆ"  ನಡೆಸಿದರು.

ನೆಲ ನಮ್ಮದು, ಜಲ ನಮ್ಮದು, ಉದ್ಯೋಗವೂ ನಮ್ಮದೆ"

ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್  ಮನೆ ಮನೆ ಪ್ರತಿಭಟನೆಯಲ್ಲಿ ಭಾಗಿಯಾದರು.


#MRPL_ಮೋಸ

#MRPL_MOSA

#TulunadudaAbhivruddidTuluvappeJokulegMallaPaal


MRPL ಉದ್ಯೋಗ ವಂಚನೆಯ ವಿರುದ್ದ "ಮನೆ ಮನೆ ಪ್ರತಿಭಟನೆ mrpl ಪ್ರಧಾನ ದ್ವಾರದ ಮುಂಭಾಗ ಸಾಂಕೇತಿಕವಾಗಿ ನಡೆಸಲಾಯಿತು

Dyfi ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸುರತ್ಕಲ್ ಘಟಕದ ಅಧ್ಯಕ್ಷ ಸಲೀಂ ಶ್ಯಾಡೊ, ಮುಖಂಡರಾದ ಶ್ರೀನಾಥ್ ಕುಲಾಲ್,ಮಕ್ಸೂದ್ ಬಿ ಕೆ,  ಸ್ಥಳೀಯ ಗಣ್ಯರಾದ ರಫೀ ಕಾಟಿಪಳ್ಳ, ಹೈದರ್ ಕಾಟಿಪಳ್ಳ, ರಿಜ್ವಾನ್ ಕಾಟಿಪಳ್ಳ, ಸಂಸುದ್ದೀನ್ ಕುಳಾಯಿ ಮತ್ತಿತರರು ಭಾಗವಹಿಸಿದ್ದರು.


Ads on article

Advertise in articles 1

advertising articles 2

Advertise under the article