-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Shard Pawar "Power"- ರಾಷ್ಟ್ರ ರಾಜಕಾರಣದಲ್ಲಿ ಸಂಚಲನ: ಪವರ್‌ಗಾಗಿ ಪವಾರ್‌ರಿಂದ ಪ್ರಮುಖ ಪ್ರತಿಪಕ್ಷ ನಾಯಕರ ಸಭೆ

Shard Pawar "Power"- ರಾಷ್ಟ್ರ ರಾಜಕಾರಣದಲ್ಲಿ ಸಂಚಲನ: ಪವರ್‌ಗಾಗಿ ಪವಾರ್‌ರಿಂದ ಪ್ರಮುಖ ಪ್ರತಿಪಕ್ಷ ನಾಯಕರ ಸಭೆ





ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರತಿಪಕ್ಷದ ಪ್ರಮುಖ ನಾಯಕರಿಗೆ ಔತಣಕೂಟ ಆಯೋಜಿಸಿ ಸಭೆ ಕರೆದಿದ್ದಾರೆ. ಚುನಾವಣಾ ಪ್ರಚಾರದ ಸ್ಪೆಷಲಿಸ್ಟ್ ಪ್ರಶಾಂತ್ ಕಿಶೋರ್ ಅವರೊಂದಿಗೆ ಎರಡು ಸುತ್ತಿನ ಸಭೆಯ ಬಳಿಕ ಶರದ್ ಪವಾರ್ ಈ ಸಭೆ ಕರೆದಿರುವುದು ಸಂಚಲನ ಮತ್ತು ಅಚ್ಚರಿಗೆ ಕಾರಣವಾಗಿದೆ.



ರಾಷ್ಟ್ರ ರಾಜಕಾರಣದಲ್ಲಿ ಪವರ್ ತೋರಿಸಲು ಪೂರ್ವತಯಾರಿ ನಡೆಸಿರುವ ಶರದ್ ಪವಾರ್ ಈ ಸಭೆ ಮೂಲಕ 2024 ಮಿಷನ್ ಮಹಾಯೋಜನೆಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.



ಪವಾರ್ ಸಭೆಯಲ್ಲಿ ಜಮ್ಮು ಕಾಶ್ಮೀರದ ಫಾರೂಕ್ ಅಬ್ದುಲ್ಲಾ, ಕಮ್ಯೂನಿಸ್ಟ್ ಪಾರ್ಟಿ ನಾಯಕ ಡಿ. ರಾಜ, ತೃಣಮೂಲ ಕಾಂಗ್ರೆಸ್ ನಾಯಕ ಯಶವಂತ್ ಸಿನ್ಹ, ಮಾಜಿ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ, ಬಾಲಿವುಡ್ ಚಿತ್ರರಂಗದ ಸಾಹಿತಿ ಜಾವೇದ್ ಅಖ್ತರ್, ಹಿರಿಯ ಪತ್ರಕರ್ತರಾದ ಕರಣ್ ಥಾಪತ್, ಆಶುತೋಷ್, ಪ್ರೀತೀಶ್ ನಂದಿ ಮೊದಲಾದವರು ಈ ಔತಣಕೂಟ ಸಭೆಯಲ್ಲಿ ಭಾಗವಹಿಸಲಿದ್ದಾರೆ.



ಶರದ್ ಪವಾರ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ಸತತ ಎರಡು ಸುತ್ತಿನ ಸಭೆ ಬಳಿಕ, ಮುಂದಿನ ಮಹಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಎದುರಿಸುವ ರಣನೀತಿಯ ಕುರಿತು ಚರ್ಚಿಸಲು ವಿಪಕ್ಷಗಳ ಸಭೆ ಕರೆಯಲಾಗಿದೆ ಎಂದು ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.



ಯಶ್ವಂತ್ ಸಿನ್ಹಾ ಪ್ರಾಯೋಜಿತ "ರಾಷ್ಟ್ರ ಮಂಚ್" ಎಂಬ ಹೆಸರಿನ ರಾಜಕೀಯ ವೇದಿಕೆಯ ನೇತೃತ್ವದಲ್ಲಿ ಶರದ್ ಪವಾರ್ ಅವರ ದೆಹಲಿಯ 6, ಜನಪಥ್ ನಿವಾಸದಲ್ಲಿ ಈ ಸಭೆ ಕರೆಯಲಾಗಿದೆ.



ಒಂದು ವಾರದ ಅಂತರದಲ್ಲಿ ಪ್ರಶಾಂತ್ ಕಿಶೋರ್ ಅವರೊಂದಿಗೆ ಎರಡನೇ ಸುತ್ತಿನ ಚರ್ಚೆಯ ನಂತರ ಶರದ್ ಪವಾರ್ ಮಹಾ ಯೋಜನೆಗೆ ಮುಂದಾಗಿದ್ದಾರೆ.



2024ರಲ್ಲಿ ನಡೆಯಲಿರುವ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಎದುರಿಸುವ ನಿಟ್ಟಿನಲ್ಲಿ 'ಮಿಷನ್ 2024 ರಣನೀತಿ'ಗೆ ಅಧಿಕೃತ ಚಾಲನೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Ads on article

Advertise in articles 1

advertising articles 2

Advertise under the article

ಸುರ