ಮಂಗಳೂರಿನ ಶಾಸಕರೇ, ಸಂಸದರೇ... ನೀವು ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಸ್ಥಳೀಯರಿಗೆ MRPL ಉದ್ಯೋಗ ಗಗನ ಕುಸುಮವಾಗಿದೆ. ಮಾತು ಉಳಿಸಿಕೊಳ್ಳಿ.. ಇಲ್ಲವೇ ಕುರ್ಚಿ ಬಿಟ್ಟು ತೊಲಗಿ ಎಂದು ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
"ಸ್ಥಳೀಯರನ್ನು ಪೂರ್ಣವಾಗಿ ಕಡೆಗಣಿಸಿ 233 ಉದ್ಯೋಗಗಳಿಗೆ ಉತ್ತರ ಭಾರತೀಯರಿಗೆ ಆದ್ಯತೆ ನೀಡಿ mrpl ನಡೆಸಿದ ನೇಮಕಾತಿಯನ್ನು ತಡೆಹಿಡಿದಿದ್ದೇವೆ, ಮುಂದಿನ ಪ್ರಕ್ರಿಯೆ ಸ್ಥಳೀಯರಿಗೆ ಆದ್ಯತೆಯೊಂದಿಗೆ ನಮ್ಮ ಉಪಸ್ಥಿತಿಯಲ್ಲಿ ನಡೆಯಲಿದೆ"* ಎಂದು ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಹಾಗೂ ಸ್ಥಳೀಯ ಬಿಜೆಪಿ ಶಾಸಕರುಗಳು ಹೇಳಿಕೆ ನೀಡಿದ್ದರು.
ಈ ಹೇಳಿಕೆ ನೀಡಿ ಈಗ ಪೂರ್ತಿ ಒಂದು ತಿಂಗಳು ಕಳೆದಿದೆ. ನೇಮಕಾತಿ ಪ್ರಕ್ರಿಯೆಗೆ ತಡೆ ಹಿಡಿಯುವುದು ಬಿಡಿ, ಈಗ 233 ಅಭ್ಯರ್ಥಿಗಳಿಗೂ ಐಡೆಂಟಿಟಿ ಕಾರ್ಡ್ ನೀಡುವ ಪ್ರಕ್ರಿಯೆಯನ್ನು MRPL ಪೂರ್ಣಗೊಳಿಸಿದೆ. ಅಲ್ಲಿಗೆ ತುಳುನಾಡಿನ ಯುವಜನರ MRPL ಉದ್ಯೋಗ ಪಡೆಯುವ ಕನಸಿನ ಸಮಾಧಿಗೆ ಕೊನೆಯ ಮೊಳೆ ಹೊಡೆದಂತಾಯಿತು. ಇನ್ನು ಆ ಕುರಿತು ಏನೂ ಉಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಸದಾ ಸುಳ್ಳ ಹೇಳಿಕೆ, ಭರವಸೆ ನೀಡುತ್ತಿರುವ ಜನಪ್ರತಿನಿಧಿಗಳು ಅಭಿವೃದ್ಧಿಗೆ ಎಳ್ಳಷ್ಟೂ ಮಾಡಿಲ್ಲ. ಅವರು ಇದ್ದರೆಷ್ಟು ತೊಲಗಿದರೆಷ್ಟು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ತುಳುನಾಡಿನ ಮಣ್ಣಿಗೆ ಮಾಡಿದ ಈ ನಿರ್ಲಜ್ಜ ಮೋಸಕ್ಕಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ತುಳುನಾಡಿನ ಬಿಜೆಪಿಯ ಶಾಸಕರೆಲ್ಲರು ರಾಜಿನಾಮೆ ಸಲ್ಲಿಸಬೇಕು. ತುಳುವಪ್ಪೆ ಜೋಕುಲು ಸ್ವರ ಲಕ್ಕಾದ್ ಪಾತೆರೊಡು ಎಂದು ಮುನೀರ್ ಕಾಟಿಪಳ್ಳ ಹೇಳಿದ್ಧಾರೆ.
#TulunadudaAbhivruddidTuluvappeJokulegMallaPaal
#ತುಳುನಾಡ_ಅಭಿವೃದ್ಧಿಡ್_ತುಳುವಪ್ಪೆಜೋಕುಲೆಗ್_ಮಲ್ಲಪಾಲ್
#ದೇಯಿದಂಡ್