-->
Kudmul Birth Anniversary- ಕಾಂಗ್ರೆಸ್ ಭವನದಲ್ಲಿ ಕುದ್ಮುಲ್ ರಂಗರಾವ್ ಜನ್ಮದಿನಾಚರಣೆ

Kudmul Birth Anniversary- ಕಾಂಗ್ರೆಸ್ ಭವನದಲ್ಲಿ ಕುದ್ಮುಲ್ ರಂಗರಾವ್ ಜನ್ಮದಿನಾಚರಣೆ

ದಲಿತೋದ್ದಾರಕ ಕುದ್ಮುಲ್ ರಂಗರಾವ್ ರವರ 162ನೇ ಜನ್ಮದಿನಾಚರಣೆಯನ್ನು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ವರ್ಗದ ಘಟಕದ ವತಿಯಿಂದ ಕದ್ರಿ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರಗಿತು. 

ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ರವರು ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಕುದ್ಮುಲ್  ರಂಗ ರಾಯರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಮಾಜಿ ಶಾಸಕ ಜೆ. ಆರ್. ಲೋಬೊ ರವರು ಮಾತನಾಡುತ್ತಾ, ದಿ. ಕುದ್ಮುಲ್ ರಂಗರಾಯ ರಲ್ಲಿದ್ದ ಸಾಮಾಜಿಕ ಬದ್ಧತೆ, ದಲಿತೋದ್ದಾರದ ಪರಿಕಲ್ಪನೆ, ಸ್ವಾರ್ಥ ರಹಿತ ಸೇವಾ ಮನೋಭಾವ ಅವರನ್ನು ಸಮಾಜದ ಉನ್ನತ ಸ್ಥಾನಕ್ಕೆ ಏರಿಸಿತ್ತು. ಅವರು ಏನನ್ನು ಹೇಳುತ್ತಾರೆ, ಅದನ್ನು ಚಾಚು ತಪ್ಪದೇ ಅನುಷ್ಠಾನ ಮಾಡುತ್ತಿದ್ದರು. ಅವರು ಮಾಡಿದಂತಹ ಜನ ಸೇವೆಗೆ ಅಂದಿನ ಕಾಲದಲ್ಲಿ ಅವರು ಮಹಾತ್ಮಾ ಗಾಂಧೀಜಿಯವರಿಂದ ಭಾರೀ ಪ್ರಶಂಸೆಗೆ ಒಳಪಟ್ಟಿದ್ದರು ಎಂದರು.ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪಾಲಿಕೆ ವಿಪಕ್ಷ ನಾಯಕ ವಿನಯ್ ರಾಜ್, ಮಾಜಿ ಉಪ ಮೇಯರ್ ರಜನೀಶ್, ಮೋಹನಾಂಗಯ್ಯ ಸ್ವಾಮಿ, ಹೊನ್ನಯ್ಯ ಮಾತನಾಡಿದರು.


 ಪ್ರಮುಖರಾದ ಲಾರೆನ್ಸ್ ಡಿಸೋಜಾ, ಟಿ. ಕೆ. ಸುಧೀರ್, ಪದ್ಮನಾಭ ಅಮೀನ್, ಎ. ಸಿ. ಜಯರಾಜ್, ನೀರಜ್ ಪಾಲ್, ಜಯರಾಜ್ ಕೋಟ್ಯಾನ್, ಶಾಂತಲಾ ಗಟ್ಟಿ, ಕೇಶವ ಮರೋಳಿ, ಅಪ್ಪಿ, ಲಿಯಾಖತ್ ಶಾ, ರಘುರಾಜ್ ಕದ್ರಿ, ದಿನೇಶ್ ಬಲಿಪಾತೋಟ, ಚೇತನ್ ಉರ್ವಾ, ಅಸ್ಲಾಂ ಬಂದರ್, ಜಯಂತಿ ಬಲಿಪಾತೋಟ, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು. 


ಬ್ಲಾಕ್ ಪರಿಶಿಷ್ಟ ಘಟಕ ಅಧ್ಯಕ್ಷ ಮಿಥುನ್ ಉರ್ವ ಸ್ವಾಗತಿಸಿ, ಪ್ರತಾಪ್ ಸಾಲ್ಯಾನ್ ವಂದಿಸಿದರು. ವಸಂತಿ ಕಾರ್ಯಕ್ರಮ ನಿರ್ವಹಿಸಿದರು.

Ads on article

Advertise in articles 1

advertising articles 2

Advertise under the article