-->
Kinya Gram Panchayat-  ಅಭಿವೃದ್ಧಿಯಲ್ಲಿ ಮೊದಲ ಸ್ಥಾನ: ಮೆಚ್ಚುಗೆಗೆ ಪಾತ್ರರಾದ ಕಿನ್ಯ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ

Kinya Gram Panchayat- ಅಭಿವೃದ್ಧಿಯಲ್ಲಿ ಮೊದಲ ಸ್ಥಾನ: ಮೆಚ್ಚುಗೆಗೆ ಪಾತ್ರರಾದ ಕಿನ್ಯ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ


ಕಿನ್ಯ ಗ್ರಾಮ ಪಂಚಾಯತ್ ಮಂಗಳೂರು ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯ ಮುಂಚೂಣಿಯಲ್ಲಿ ಕಾರ್ಯಾಚರಿಸುವ ಪಂಚಾಯತಲ್ಲಿ ಕಿನ್ಯ ಗ್ರಾಮ ಪಂಚಾಯತ್ ಪ್ರಥಮ ಹಂತದಲ್ಲಿದೆ.ಇತ್ತೀಚೆಗೆ ನೂತನವಾಗಿ ಆಯ್ಕೆಯಾಗಿ ಅಧ್ಯಕ್ಷೆಯಾದ ಲಕ್ಷ್ಮೀ ಯವರ ನೇತೃತ್ವದಲ್ಲಿ ಸದಸ್ಯರೆಲ್ಲರೂ ಸೇರಿಕೊಂಡು 15 ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಸುಮಾರು 33 ಲಕ್ಷ ರೂಪಾಯಿ ಅನುದಾನವನ್ನು ಹಂಚಿಕೆ ಮಾಡಿದ್ದಾರೆ.ಇದನ್ನು ಸರಕಾರದ ಸುತ್ತೋಲೆ ಪ್ರಕಾರ ಆಡಳಿತ ವೆಚ್ಚ ಮತ್ತು ಶೇಕಡಾ 25% ಮೀಸಲಿಟ್ಟು ಪ್ರತೀ ವಾರ್ಡಿಗೂ ಯಾವ ತಾರತಮ್ಯ ಮಾಡದೆ ಸರಿ ಸಮಾನವಾಗಿ ಹಂಚಿಕೆ ಮಾಡಿ ಕ್ರಿಯಾಯೋಜನೆ ಕೈಗೊಂಡು ಹೊಸ ಕಾಮಗಾರಿಯನ್ನು ಕೈಗೆತ್ತಿಕೊಂಡು ಗ್ರಾಮವನ್ನು ಮಾದರಿ ಗ್ರಾಮವಾಗಿ ಪರಿವರ್ತಿಸಲು ಕಿನ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀ ಅವರ ನೇತೃತ್ವದಲ್ಲಿ ಎಲ್ಲಾ ಸದಸ್ಯರೆಲ್ಲರ ಒಗ್ಗಟ್ಟಿನ ಫಲವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿದೆ.ಅದೋ ಅಲ್ಲದೆ ಪಂಚಾಯತ್ ಸ್ವಂತ ನಿಧಿಯಿಂದ ಪ್ರತೀ ವಾರ್ಡುಗಳಿಗೂ ತಲಾ ಒಂದು ವರ್ಷಕ್ಕೆ 35ಸಾವಿರ ರೂಪಾಯಿ ರಸ್ತೆ ಬದಿ ತಾತ್ಕಾಲಿಕ ನೀರು ಹರಿದು ಹೋಗಲು ಚರಂಡಿ ದುರಸ್ತಿ ಮತ್ತು ಸ್ವಚ್ಛ ಮಾಡಲು ಮೀಸಲಿಟ್ಟು ಅನುಧಾನವನ್ನು ಬಿಡುಗಡೆ ಮಾಡಲಾಯಿತು.ಇಷ್ಟು ಬೇಗನೇ ಈ ಎಲ್ಲಾ ಅನುಧಾನವನ್ನು ಬಿಡುಗಡೆ ಮಾಡುವಲ್ಲಿ ಪಂಚಾಯತ್ ಅಧ್ಯಕ್ಷರೂ ಉಪಾದ್ಯಕ್ಷರು ಮತ್ತು ಎಲ್ಲಾ ಸದಸ್ಯರ ಶ್ರಮದಲ್ಲಿ ಸಾಧ್ಯವಾಯಿತು. ಈ ಸಂದರ್ಭದಲ್ಲಿ ನಾಡಿನ ಸರ್ವ ನಾಗರಿಕರ ಪ್ರಶಂಸೆಗೆ ಕಿನ್ಯ ಗ್ರಾಮ ಪಂಚಾಯತ್ ಪಾತ್ರರಾದರು.ಇನ್ನೆಷ್ಟು ಗ್ರಾಮ ಉತ್ತಮ ಗೊಳಿಸಿ ಮಾದರಿ ಗ್ರಾಮವಾಗಲು ಮಾಜಿ ಸಚಿವರು ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ರವರ ಮುತವರ್ಜಿಯಲ್ಲಿ ಸಾಧ್ಯವಾಗಲು ಇನ್ನು ಕೆಲವೇ ಸಮಯಗಳು ಸಾಕು ಅವರ ಮಾರ್ಗದರ್ಶನದಲ್ಲಿ ಹಲವಾರು ಅನುದಾನವನು ಕಾದಿರಿಸಿದ್ದಾರೆ. 

Ads on article

Advertise in articles 1

advertising articles 2

Advertise under the article