-->
historic Circle demolished- ಮಂಗಳೂರಿನ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ ರಾತೋರಾತ್ರಿ ನೆಲಸಮ!

historic Circle demolished- ಮಂಗಳೂರಿನ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ ರಾತೋರಾತ್ರಿ ನೆಲಸಮ!
ಮಂಗಳೂರಿನ ಹೃದಯ ಭಾಗದಲ್ಲಿ ಇರುವ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತವನ್ನು ರಾತೋರಾತ್ರಿ ನೆಲಸಮ ಮಾಡಲಾಗಿದೆ. ಯಾರೊಬ್ಬರಿಗೂ ಯಾವುದೇ ಸುಳಿವು ನೀಡದೆ, ಸ್ಮಾರ್ಟ್ ಸಿಟಿ ಕಾಮಗಾರಿಯ ನೆಪದಲ್ಲಿ ಈ ವೃತ್ತವನ್ನು ಕೆಡವಲಾಗಿದೆ.ದಶಕಗಳ ಹಿಂದೆ ಮಂಗಳೂರಿನ ಪ್ರಮುಖ ಪತ್ರಿಕೆಯಾಗಿದ್ದ ನವಭಾರತ ಮುದ್ರಣಾಲಯ ಮತ್ತು ಕಚೇರಿ ಇದ್ದ ಕಾರಣಕ್ಕೆ ಈ ವೃತ್ತವನ್ನು ನವಭಾರತ ಸರ್ಕಲ್ ಎಂದು ಕರೆಯಲಾಗುತ್ತಿತ್ತು.


ರಾಜ್ಯದ ಮೊದಲ ರಾಷ್ಟ್ರಕವಿ ಪಂಜೆ ಗೋವಿಂದ ಪೈ ನೆನಪಿಗೆ ಈ ವೃತ್ತವನ್ನು ಗೋವಿಂದ ಪೈ ವೃತ್ತ ಎಂದು ಹೆಸರಿಡಲಾಗಿತ್ತು.

ಈ ವೃತ್ತವನ್ನು ಧ್ವಂಸ ಮಾಡಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಸಂಘಟನೆಗಳು ಈ ಕಾಮಗಾರಿ ಬಗ್ಗೆ ಧ್ವನಿ ಎತ್ತಿವೆ. ನಾಳೆ ಎರಡನೇ ಶನಿವಾರವಾಗಿದ್ದು, ಕೋರ್ಟ್ ಕಚೇರಿಗಳಿಗೆ ರಜೆ. ಈ ಸಮಯವನ್ನು ನೋಡಿ ಕದ್ದುಮುಚ್ಚಿ ಇಂತಹ ಕೃತ್ಯಕ್ಕೆ ಕೈ ಹಾಕಿರುವ ದರ್ದು ಏನು ಎಂದು ಮಂಗಳೂರಿನ ಜನತೆ ಪ್ರಶ್ನೆ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article