-->
Sonu Sood helping hand towards Suresh Raina | ಯೋಗಿ ಆದಿತ್ಯನಾಥ್‌ಗೆ ಮನವಿ ಮಾಡಿದ ಸುರೇಶ್ ರೈನಾ: 10 ನಿಮಿಷದಲ್ಲಿ ನೆರವು ನೀಡಿದ ಸೋನು ಸೂದ್!

Sonu Sood helping hand towards Suresh Raina | ಯೋಗಿ ಆದಿತ್ಯನಾಥ್‌ಗೆ ಮನವಿ ಮಾಡಿದ ಸುರೇಶ್ ರೈನಾ: 10 ನಿಮಿಷದಲ್ಲಿ ನೆರವು ನೀಡಿದ ಸೋನು ಸೂದ್!

ಕಳೆದ ವರ್ಷದ ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರ ಪಾಲಿಗೆ ದೇವರಾಗಿ ಬಂದ ಬಾಲಿವುಡ್ ತಾರೆ ಸೋನು ಸೂದ್ ಮತ್ತೆ ಸುದ್ದಿಯಲ್ಲಿದ್ದಾರೆ.


ಈ ಬಾರಿ ಸೆಲೆಬ್ರಿಟಿ ಸ್ಟಾರ್ ಕ್ರಿಕೆಟರ್ ಸುರೇಶ್ ರೈನಾ ಅವರಿಗೆ ನೆರವಿನ ಹಸ್ತ ಚಾಚುವ ಮೂಲಕ ಸೋನು ಸೂದ್ ತಮ್ಮಲ್ಲಿನ ಮಾನವೀಯ ಮುಖವನ್ನು ಪ್ರದರ್ಶಿಸಿದ್ದಾರೆ.


ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನ ಅವರು ತಮ್ಮ 65 ವರ್ಷದ ಚಿಕ್ಕಮ್ಮ ಕೋವಿಡ್ ಸೋಂಕಿಗೆ ತುತ್ತಾಗಿದ್ದು, ತುರ್ತು ಆಮ್ಲಜನಕದ ನೆರವು ನೀಡುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಟ್ವೀಟ್ ಮಾಡಿದ್ದರು.


ಈ ಟ್ವೀಟ್ ಮಾಡಿದ 10 ನಿಮಿಷದಲ್ಲಿ ಸ್ಪಂದಿಸಿದ ಬಾಲಿವುಡ್ ತಾರೆ ಸೋನು ಸೂದ್, ಆಮ್ಲಜನಕದ ಸಿಲಿಂಡರ್ ಇನ್ನು 10 ನಿಮಿಷದಲ್ಲಿ ಲಭ್ಯವಾಲಿದೆ.. ಎಂಬ ಭರವಸೆ ನೀಡಿದ್ದರು.


 ಕೇವಲ ಭರವಸೆ ಮಾತ್ರವಲ್ಲ, ತಾನು ಮಾತು ನೀಡಿದಂತೆ 10 ನಿಮಿಷದಲ್ಲಿ ಆಮ್ಲಜನಕದ ಸಿಲಿಂಡರ್ ವ್ಯವಸ್ಥೆಯನ್ನೂ ಮಾಡಿದ್ದರು ಸೋನು ಸೂದ್.

ಕಷ್ಟಕಾಲದಲ್ಲಿ ತಮ್ಮ ನೆರವಿಗೆ ದಾವಿಸಿದ ಸೋನು ಸೂದ್ ಅವರಿಗೆ ಸುರೇಶ್ ರೈನಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಜೊತೆಗೆ ನಿಮ್ಮಿಂದ ದೊಡ್ಡ ಉಪಕಾರವಾಗಿದೆ, ದೇವರು ನಿಮಗೆ ಆಶೀರ್ವಾದ ಮಾಡಲಿ ಎಂದು ಹಾರೈಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಯಾರು ಯಾವುದೇ ಸಹಾಯ ಕೋರಿದರೂ ತಮ್ಮಿಂದ ಆದ ಸಾಧ್ಯವಾಗುವ ಎಲ್ಲ ಸಹಾಯವನ್ನು ಮಾಡುತ್ತಲೇ ಬಂದಿರುವ ಸೋನು ಸೂದ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article

holige copy 1.jpg